ಇತರೆ
ಕುಂದಾಪುರ ಹೊಳೆಯ ಬದಿಯಲ್ಲಿ ಅಂದರ್- ಬಾಹರ್ ಇಸ್ಪೀಟ್ ಆಟ : ನಾಲ್ವರು ವಶಕ್ಕೆ

Views: 390
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು ಅಣ್ಣಯ್ಯ, ಸುರೇಶ,ದಯಾನಂದ, ಉಬೇದುಲ್ಲಾ ಎಂದು ತಿಳಿದು ಬಂದಿದೆ.
ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಠಾಣೆಯವರು ರೌಂಡ್ಸ್ ನಲ್ಲಿರುವಾಗ ಕಸಬಾ ಗ್ರಾಮದ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ದಾಳಿ ಮಾಡಲು ಹೋದಾಗ ಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದ್ದರು. ಇದೇ ವೇಳೆ ಇಸ್ಪೀಟ್ ಎಲೆಗಳು, ನಗದು ರೂಪಾಯಿ 3150/-, ಬೈಕ್, ಮೊಬೈಲ್ ಪೋನ್ ಗಳು ಮತ್ತು ಆಟಕ್ಕೆ ಬಳಸಿದ ಇನ್ನಿತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.