ಇತರೆ

ಕುಂದಾಪುರ: ಹೇರಿಕುದ್ರು ಮನೆಯೊಂದರಲ್ಲಿ ಚಿನ್ನಾಭರಣ ಕಳವು

Views: 176

ಕುಂದಾಪುರ: ಆನಗಳ್ಳಿ ಗ್ರಾಮದ ಹೇರಿಕುದ್ರು ಆಸ್ಟೀನ ಡಿ ಅಲ್ಮೇಡ ಅವರ ಮನೆಯ ಕಪಾಟಿನಲ್ಲಿದ್ದ 1.95 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

ಆಸ್ಟೀನ ಡಿ ಅಲ್ಮೇಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮರಳಿ ಮನೆಗೆ ಬಂದು ನೋಡಿದಾಗ ಬಾಗಿಲ ಚಿಲಕವನ್ನು ಒಡೆದಿರುವುದು ಕಂಡುಬಂದಿತ್ತು. ಮನೆಯ ಒಳಗೆ ಸೊತ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂದಿದೆ. ಕಪಾಟಿನಲ್ಲಿದ್ದ 1.95 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button
error: Content is protected !!