ಇತರೆ
ಕುಂದಾಪುರ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ: ಕಾರು ಜಖಂ, ತೆಕ್ಕಟ್ಟೆ ಉದ್ಯಮಿ, ಪುತ್ರ ಪ್ರಾಣಾಪಾಯದಿಂದ ಪಾರು

Views: 279
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಇನ್ನೋವಾ ಕಾರಿಗೆ ಗುರುವಾರ ತಡರಾತ್ರಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೆಕ್ಕಟ್ಟೆಯ ಉದ್ಯಮಿ ಮತ್ತು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.
ರಾತ್ರಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿಸಲೆಂದು ತೆಕ್ಕಟ್ಟೆ ಶ್ರೀ ಗಣೇಶ್ ಸಿಲ್ಸ್‌ನ ಮಾಲಕ ಅನಂತ ನಾಯಕ್ ತೆಕ್ಕಟ್ಟೆ (57) ಅವರು ಪುತ್ರ ಅನೂಪ್ ನಾಯಕ್ (23)ಜತೆಯಲ್ಲಿ ತೆರಳಲು ಇನ್ನೋವಾ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಇನ್ನೊಬ್ಬ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಿದ್ದರು.ಈ ಸಂದರ್ಭ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯೊಂದು ಕಾರಿನ ಹಿಂಬಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇನ್ನೋವಾ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.