ಇತರೆ
ಕುಂದಾಪುರ: ಸೌಡ ಬಳಿ ಆಟೋ ಮಗುಚಿ ಬಿದ್ದು, ಬಾಲಕ ಗಂಭೀರ
Views: 12
ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ತರಬೇತಿ ತರಗತಿ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಧ್ರುವರಾಜ್ (11) ಮನೆಗೆ ವಾಪಾಸಾಗುತ್ತಿರುವಾಗ, ಸೌಡ ಬಳಿ ಆಟೋ ಚಾಲಕ ಅತೀ ವೇಗವಾಗಿ ಆಟೋ ಚಲಾಯಿಸಿದ್ದರ ಪರಿಣಾಮ ಆಟೋ ಮಗುಚಿ ಬಿದ್ದ ಘಟನೆ ನಡೆದಿದೆ.
ಆಟೋದಲ್ಲಿದ್ದ ಧ್ರುವರಾಜ್ ಗಂಭೀರವಾಗಿ ಗಾಯಗೊಂಡ ಪರಿಣಾಮ, ಅವನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆಟೋ ಚಾಲಕ ಬಾಲಕನ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದ್ದ. ಇಲ್ಲಿಯ ತನಕ ಚಿಕಿತ್ಸೆಗೆ ಹಣ ನೀಡದೆ ಇರುವುದರಿಂದ ಧ್ರುವರಾಜ್ ತಾಯಿ ಸೌಡ ನಾಗರತ್ನ ಎನ್.ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಂಕರನಾರಾಯಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






