ಆರ್ಥಿಕ
ಕುಂದಾಪುರ: ಸಾಲ ವಸೂಲಿಗಾರನಿಂದ ವಂಚನೆ!

Views: 211
ಕುಂದಾಪುರ: ಕುಂದಾಪುರದ ಸ್ಪಂದನ ಸ್ಪೂರ್ತಿ ಫೈನಾನ್ಸ್ ಹಣಕಾಸು ಸಂಸ್ಥೆಯ ಲೋನ್ ಆಫೀಸರ್ ರಾಘವೇಂದ್ರ ಅವರು ಸಾಲ ವಸೂಲಿಯ ಕಂತಿನಲ್ಲಿ ಸಂಗ್ರಹವಾದ 78 ಸಾವಿರ ರೂ.ಗಳನ್ನು ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.
ರಾಘವೇಂದ್ರ 400ಕ್ಕೂ ಗ್ರಾಹಕರ ಸಾಲದ ಕಂತನ್ನು ವಸೂಲಿ ಮಾಡುವ ಜವಾಬ್ದಾರಿ ನೀಡಲಾಗಿತ್ತು, ಅದರಲ್ಲಿ 27 ಸಾಲಗಾರರ ಸಾಲದ ಕಂತಿನ ಬಾಬ್ತು 78,650 ರೂ.ಗಳನ್ನು ಮಾಸಿಕವಾಗಿ ವಸೂಲಿ ಮಾಡಿ ಸಂಸ್ಥೆಯ ಸ್ಲಿಪ್‌ನಲ್ಲಿ ಸಾಲಗಾರರ ಸಹಿ ಪಡೆದುಕೊಂಡಿದ್ದಾನೆ.ಗ್ರಾಹಕರ ಸಾಲದ ಕಂತನ್ನು ತನ್ನ ಮೊಬೈಲ್ ನಲ್ಲಿ ತನ್ನ ಖಾತೆಗೆ ಹಾಕಿಸಿಕೊಂಡು ಹಣವನ್ನು ಸಂಸ್ಥೆಗೆ ನೀಡದೆ ಮೋಸ ಮಾಡಿದ್ದಾಗಿ ಪ್ರಕರಣ ಕುಂದಾಪುರ ಠಾಣೆಯಲ್ಲಿ ದಾಖಲಾಗಿದೆ.