ಇತರೆ
ಕುಂದಾಪುರ: ಸಬ್ಲಾಡಿಯ ಸ್ಟೀಲ್ ಬ್ರಿಡ್ಜ್ ಸಮೀಪ ರೈಲು ಡಿಕ್ಕಿಯಾಗಿ ಯುವಕ ಸಾವು
Views: 214
ಕನ್ನಡ ಕರಾವಳಿ ಸುದ್ದಿ: ರೈಲು ಹಳಿ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಡಿಕ್ಕಿಯಾಗಿ ಸಾವನಪ್ಪಿದ ಘಟನೆ ನಡೆದಿದೆ.
ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಮೃತಪಟ್ಟವರು.
ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿಯ ಸ್ಟೀಲ್ ಬ್ರಿಡ್ಜ್ ಸಮೀಪ ಜ.8 ರಂದು ಬೆಳಿಗ 6 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಜನಾರ್ದನ ಅವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು.
ಅವರ ದೊಡ್ಡಮ್ಮನ ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






