ಇತರೆ
ಕುಂದಾಪುರ: ವಂಡ್ಸೆ ಕಟ್ಟೆಮನೆ ಹೇಮಂತ್ ಕುಮಾರ್ ಶೆಟ್ಟಿ ನಿಧನ
Views: 226
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಂಡ್ಲೆ ಕಟ್ಟೆಮನೆ ಹೇಮಂತ್ ಕುಮಾರ್ ಶೆಟ್ಟಿ (59ವ) ಅವರು ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ಪುತ್ರಿ, ಅಳಿಯ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
ಇವರು ಜ್ಯೋತಿ ಲ್ಯಾಬೋರೆಟರಿ ಲಿಮಿಟೆಡ್ ಕಂಪೆನಿಯಲ್ಲಿ ಜೋನಲ್ ಕಮರ್ಷಿಯಲ್ ಮೇನೇಜರ್ ಆಗಿ ಸೇವೆ ಸಲ್ಲಿಸುತಿದ್ದರು. ಸುವಿಧಾ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, ಕುಂದಾಪುರ ಇದರ ನಿರ್ದೇಶಕರೂ ಆಗಿಯೂ ಸೇವೆ ಸಲ್ಲಿಸುತ್ತಿದ್ದರು.
ಸರಳ ಸಜ್ಜನಿಕೆಯ ಜನಾನುರಾಗಿ ಆಗಿದ್ದ ಇವರು ಸೌಮ್ಯ ಸ್ವಭಾವದ ಸ್ನೇಹ ಹೃದಯಿಯಾಗಿದ್ದರು. ಅಪಾರ ಸ್ನೇಹಿತ ಬಳಗವನ್ನು ಹೊಂದಿದ್ದರು. ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದರು.






