ಜನಮನ
ಕುಂದಾಪುರ ಮನೆಗೆ ನುಗ್ಗಿ ಲಕ್ಷಾಂತರ ರೂಪಯಿಯ ಚಿನ್ನಾಭರಣ ಕಳ್ಳತನ

Views: 31
ಕುಂದಾಪುರ: ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ಒಡವೆ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ಕಸಬಾ ಗ್ರಾಮ ಕುಂದಾಪುರದಲ್ಲಿ ಇರುವ ಅಬ್ದುಲ್ ಸಲಾಮ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಯ ಪಶ್ಚಿಮದಲ್ಲಿರುವ ಪ್ಯಾಸೇಜಿನ ಉತ್ತರದ ಗೋಡೆಗೆ ಅಳವಡಿಸಿದ ಕಬ್ಬಿಣದ ಗ್ರಿಲ್ ಇರುವ ಬಾಗಿಲಿನ ಚಿಲಕವನ್ನು ಒಡೆದು ರಾತ್ರಿ ಯಾರೋ ಕಳ್ಳರು ಒಳಪ್ರವೇಶಿಸಿ ಮನೆಯ ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ತೆಗೆದು ಅದರೊಳಗೆ ಇದ್ದ 320 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2023 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.






