ಆರ್ಥಿಕ

ಕುಂದಾಪುರ: ತಲ್ಲೂರಿನ ಸಹಕಾರಿ ಸಂಸ್ಥೆಯಲ್ಲಿ ಭಾರಿ ವಂಚನೆ, ಪ್ರಕರಣ ದಾಖಲು

Views: 1683

ಕುಂದಾಪುರ: ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರಿನಲ್ಲಿ 2016ರಿಂದ 2022ರವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಎಂಬವರು ಸಂಘಕ್ಕೆ 23 ಲಕ್ಷ ರೂ. ದುರುಪಯೋಗಪಡಿಸಿದ ಕುರಿತು ಪ್ರಕರಣ ದಾಖಲಾಗಿದೆ.

ಕರ್ತವ್ಯದ ಅವಧಿಯಲ್ಲಿ ಸಂಘದ ಸದಸ್ಯರ ಬೇರೆ ಬೇರೆ ಖಾತೆಗಳಿಂದ ಸಂಘದ ಸ್ವರಸಿಂಚನ ಖಾತೆಗೆ ಬಂದ ಹಣ 6,37,428 ರೂ. ಸಂಘದ ಖಾತೆಗೆ ಜಮಾ ಮಾಡದೇ ದುರುಪಯೋಗ ಪಡಿಸಿಕೊಂಡಿದ್ದಾರೆ.

ಹಲವಾರು ರೀತಿಯಲ್ಲಿ ಸಂಸ್ಥೆಗೆ ಮೋಸ ಮಾಡುವ ಉದ್ದೇಶದಿಂದ ಸಂಘದ ದಾಖಲೆಗಳನ್ನು ಅನಧಿಕೃತವಾಗಿ ತಿದ್ದಿ ತನ್ನ ಲಾಭಕ್ಕಾಗಿ ಒಟ್ಟು 23,62,793ರೂ.ಗಳನ್ನು ದುರುಪಯೋಗಪಡಿಸಿಕೊಂಡು ಸಂಘಕ್ಕೆ ಮೋಸ ಮಾಡಿರುವುದಾಗಿ ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ ನೀಡಿದ ದೂರಿನಂತೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button