ಇತರೆ
ಕುಂದಾಪುರ :ಚಿನ್ಮಯ್ ಆಸ್ಪತ್ರೆಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಅವರಿಗೆ ಮಾತ್ರವಿಯೋಗ

Views: 211
ಕುಂದಾಪುರ: ಚಿನ್ಮಯ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಅವರ ತಾಯಿ ಶ್ರೀಮತಿ ಚಂದಮ್ಮ(96) ಇಂದು ಅಲ್ಪಕಾಲದ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಮೃತರು ಪುತ್ರ ಡಾ.ಉಮೇಶ್ ಪುತ್ರನ್ ಸೇರಿದಂತೆ ಇನ್ನೋರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ತಮ್ಮ ಆದರ್ಶಮಯ ವ್ಯಕ್ತಿತ್ವದಿಂದ ಪರಿಸರದಲ್ಲಿ ಎಲ್ಲರಿಗೂ ಆತ್ಮೀಯರಾಗಿದ್ದ ಚಂದಮ್ಮ ಅವರ ಅಂತ್ಯಕ್ರಿಯೆ ಜುಲೈ 27ರಂದು ಅರಾಟೆಯಲ್ಲಿ ನಡೆಯಲಿದ್ದು ಬೆಳಿಗ್ಗೆ 8:30 ರಿಂದ 10.30 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.






