ಕ್ರೀಡೆ

ಕುಂದಾಪುರ: ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ದಾಳಿ, ನಗದು, ಸೊತ್ತು ವಶಕ್ಕೆ 

Views: 223

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಫೆರಿ ರಸ್ತೆಯ ಪಾರ್ಕ್ ಬಳಿ ಆಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ಕುಂದಾಪುರ ಎಸ್‌ಐ ನಂಜಾನಾಯ್ಕ ಎನ್. ದಾಳಿ ಮೇಲೆ ದಾಳಿ ನಡೆಸಿ ನಗದು, ಸೊತ್ತು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಸತೀಶ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಕ್ಕಿಯಾನೆ ವಿಕಾಸ್ ಹಾಗೂ ವಿವೇಕ ಎಂಬ ಇಬ್ಬರು ಪರಾರಿಯಾಗಿದ್ದಾರೆ.

ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಮ್‌ನಲ್ಲಿ ಪಂಚಾಬ್ ಕಿಂಗ್ಸ್ ಮತ್ತು ಲಕ್ಕೋ ತಂಡಗಳ ನಡುವೆ ನಡೆಯುತ್ತಿದ್ದ ಟಿ20 ಕ್ರಿಕೆಟ್ ಮ್ಯಾಚ್‌ಗೆ ಸಂಬಂಧಪಟ್ಟು ಮೊಬೈಲ್ ಫೋನ್‌ನಲ್ಲಿ ಪಾರ್ಕರ್ ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ದಂಧೆ ನಡೆಸುತ್ತಿದ್ದರು. 4,700 ರೂ. ಹಾಗೂ ಮೊಬೈಲ್ ಫೋನ್ ಸ್ವಾಧೀನಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!