ಕರಾವಳಿ

ಕುಂದಾಪುರ: ಕೋರೆಯಲ್ಲಿ ಅಕ್ರಮ ಕಲ್ಲುತೆಗೆಯುವ ಕಾರ್ಯಕ್ಕೆ ದಾಳಿ :ಓರ್ವ ಬಂಧನ, ಹಿಟಾಚಿ, ಟಿಪ್ಪರ್ ವಶಕ್ಕೆ 

Views: 172

ಕುಂದಾಪುರ: ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ, ಹಿಟಾಚಿ, ಟಿಪ್ಪರ್ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಕೋಟ ಪೊಲೀಸರು ದಾಳಿ ನಡೆಸಿದಾಗ ಬೇಳೂರಿನಿಂದ ನೂಜಿ ಕಡೆಗೆ ಹೋಗುವ ರಸ್ತೆಯ ಬಳಿಯಲ್ಲಿರುವ ಕೋರೆಯಲ್ಲಿ ಶಿಲೆ ಕಲ್ಲು ಒಡೆದು ಹಾಕಿ ಟಿಪ್ಪರ್ ಬಳಿ ರಾಶಿ ಹಾಕುತ್ತಿರುವುದು ಕಂಡು ಬಂದಿದೆ.

ಹಿಟಾಚಿ ಚಾಲಕ ಸುರೇಶ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಹಿಟಾಚಿ, ಟಿಪ್ಪರ್ ಹಾಗೂ ಸುಮಾರು 10 ಟನ್ ಶಿಲೆ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಗೆಬೆಟ್ಟುವಿನ ಸುರೇಶ ಮತ್ತು ಪ್ರತಾಪ ಎಂಬವರು ಈ ಕಲ್ಲುಕೋರೆಯಲ್ಲಿ ಅಕ್ರಮ ಕಲ್ಲು ತೆಗೆಯುವ ಕಾರ್ಯ ನಡೆಸುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Related Articles

Back to top button
error: Content is protected !!