ಇತರೆ

ಕುಂದಾಪುರ :ಕೊರ್ಗಿಯುಲ್ಲಿ ಅಂದರ್‌ ಬಾಹರ್‌ ಇಸ್ಪಿಟು ಆಡುತ್ತಿದ್ದ 7 ಮಂದಿ ಸೆರೆ

Views: 1407

ಕುಂದಾಪುರ: ಕೊರ್ಗಿ ಗ್ರಾಮದ ಮೂಡು ಕೊರ್ಗಿಯಲ್ಲಿ ಅಂದರ್‌ ಬಾಹರ್‌ ಇಸ್ಪಿಟು ಆಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ದಿನೇಶ್‌ ಎಸ್‌., ಶೇಖರ, ಮಂಜುನಾಥ, ಉದಯ, ಹೆರಿಯ, ಸುಭಾಷ್‌ ಹಾಗೂ ಸುಭಾಶ್ಚಂದ್ರರನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಬಳಿಯಿದ್ದ 11,820 ರೂ. ನಗದು ಹಾಗೂ ಆಟದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!