ಕುಂದಾಪುರ ಎಗ್ ಕರಿ ಮಾಡುವುದು ಹೇಗೆ ?

Views: 115
ಬೇಕಾಗುವ ಸಾಮಾಗ್ರಿಗಳು;
ಗುಂಟೂರು ಒಣ ಮೆಣಸು,ಒಣ ಮೆಣಸು,ಕೊತ್ತಂಬರಿ ಬೀಜ,ಕಾಳು ಮೆಣಸು, ಜೀರಿಗೆ,ಮೆಂತ್ಯ ಬೀಜ,ಹಳದಿ ಪುಡಿ, 1 ಈರುಳ್ಳಿ, ಬೆಳ್ಳುಳ್ಳಿ ಎಸಳುಗಳು, ಹುಣಸೆ ಹಣ್ಣಿನ ರಸ, ಹಸಿ ತೆಂಗಿನಕಾಯಿ ತುರಿ, 4 ಮೊಟ್ಟೆಗಳು, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ ಹೇಗೆ
ಸಣ್ಣ ಉರಿಯಲ್ಲಿ ಗುಂಟೂರು ಮೆಣಸು ಹಾಗು ಬ್ಯಾಡ್ಗಿ ಮೆಣಸುಗಳನ್ನು ಹುರಿಯಿರಿ.
ಇದಕ್ಕೆ ಕೊತ್ತಂಬರಿ ಬೀಜ,ಕಾಳು ಮೆಣಸು,ಜೀರಿಗೆ, ಮೆಂತ್ಯ ಬೀಜಗಳನ್ನು ಸೇರಿಸಿ ಎಲ್ಲವು ಗರಿಯಾಗುವ ತನಕ ಹುರಿಯಿರಿ.
ನಂತರ ಇವುಗಳನ್ನು ಹಳದಿ ಪುಡಿ, ಈರುಳ್ಳಿ(1/2),ಬೆಳ್ಳುಳ್ಳಿ ಎಸಳುಗಳು, ಹುಣಸೆ ಹಣ್ಣಿನ ರಸ, ತೆಂಗಿನಕಾಯಿ ತುರಿ, ಬೇಕಾದಷ್ಟು ಪ್ರಮಾಣದ ನೀರಿನ ಜೊತೆ ಬೆರೆಸಿ ಗ್ರೈಂಡರ್ ನಲ್ಲಿ ನುಣ್ಣಗೆ ಪೇಸ್ಟ್ ಮಾಡಿ.
ತಯಾರಾದ ಮಸಾಲೆಯ ಹದ ಸ್ವಲ್ಪ ತೆಳುವಾಗಿರುವ ಹಾಗೆ ನೋಡಿಕೊಳ್ಳಿ.
ಇದಕ್ಕೆ ಉಳಿದ ಈರುಳ್ಳಿ,ಉಪ್ಪನ್ನು ಸೇರಿಸಿ ಮಧ್ಯಮ ಉರಿಯಲ್ಲಿ 3 ನಿಮಿಷ ಕುದಿಯಲು ಬಿಡಿ.
ಇದಕ್ಕೆ ಒಂದೊಂದಾಗಿ ಮೊಟ್ಟೆಗಳನ್ನು ಒಡೆದು ಹಾಕಿ. ಮೊಟ್ಟೆ ಕದಡದೆ ಹಾಗೆಯೆ ಮತ್ತೆ 3 ನಿಮಿಷ ಕುದಿಯಲು ಬಿಡಿ.
ನಿಧಾನವಾಗಿ ಮೊಟ್ಟೆಗಳನ್ನು ಮಗುಚಿ, ಮತ್ತೆ 1 ನಿಮಿಷ ಕುದಿಯಲು ಬಿಟ್ಟರೆ ಕುಂದಾಪುರ ಸ್ಪೆಷಲ್ ಮೊಟ್ಟೆ ಗ್ರೇವಿ ರೆಡಿ!






