ಇತರೆ
ಕುಂದಾಪುರ: ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನ !

Views: 906
ಕುಂದಾಪುರ: ಉದ್ಯಮಿ ಸುರೇಂದ್ರ ಶೆಟ್ಟಿ ಅವರಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ ಘಟನೆ ಕುಂದಾಪುರ ಕೆಎಸ್ಸಾರ್ಟಿಸಿ ಡಿಪೊ ಬಳಿ ನಡೆದಿದೆ.
ಈ ಪ್ರಕರಣದ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸುರೇಂದ್ರ ಶೆಟ್ಟಿ ಅವರ ಪತ್ನಿಯ ಹೆಸರಿನಲ್ಲಿದ್ದ ಕಟ್ಟಡವೊಂದರ ಕಾಮಗಾರಿಯನ್ನು ವ್ಯಕ್ತಿಯೊಬ್ಬರಿಗೆ ವಹಿಸಿದ್ದು ಈ ವಿಷಯದಲ್ಲಿ ಮತ್ತೂಬ್ಬ ಉದ್ಯಮಿ ಸತೀಶ್ ಶೆಟ್ಟಿ ಅಸಮಾಧಾನ ಹೊಂದಿದ್ದರು.ಇದೇ ವಿಚಾರಕ್ಕೆ ಸತೀಶ್ ಶೆಟ್ಟಿ, ಸನ್ನಿಧಿ ಶೆಟ್ಟಿ ಅವರು ಸುರೇಂದ್ರ ಶೆಟ್ಟಿ ಅವರ ಕಾರನ್ನು ಕುಂದಾಪುರ ಕೆಎಸ್ಸಾರ್ಟಿಸಿ ಡಿಪೊ ಬಳಿ ಅಡ್ಡಗಟ್ಟಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲು ಪ್ರಯತ್ನಪಟ್ಟಿದ್ದು ಕಿಟಕಿ ಬಾಗಿಲು ತೆರೆಯದಿದ್ದಾಗ ಕಾರಿನ ಬಾಗಿಲು ಜಖಂಗೊಳಿಸಿದ್ದಲ್ಲದೆ, ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.






