ಇತರೆ

ಕುಂದಾಪುರ:ಶಂಕರನಾರಾಯಣದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪವರ್‌ಮ್ಯಾನ್ ಸಾವು

Views: 261

ಕನ್ನಡ ಕರಾವಳಿ ಸುದ್ದಿ:ಶಂಕರನಾರಾಯಣದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪವರ್‌ಮ್ಯಾನ್ ಸಾವನಪ್ಪಿದ ಘಟನೆ ನಡೆದಿದೆ.

ಸಿದ್ದಾಪುರ ಮೆಸ್ಕಾಂ ಶಾಖೆಯ ಪವರ್‌ಮ್ಯಾನ್ ಸಚಿನ್‌ ಕಲ್ಲಪ್ಪ ಸಂಕ್ರಟ್ಟಿ(28) ಮೃತಪಟ್ಟವರು.

ನ.22ರ ರಾತ್ರಿ ಬೆಳಗಾವಿಗೆ ತೆರಳುವ ಸ್ನೇಹಿತ ಬಸವ ಕಿರಣ ಅವರನ್ನು ಬಿಡಲು ಕುಂದಾಪುರಕ್ಕೆ  ಎರಡು ಬೈಕ್‌ಗಳಲ್ಲಿ  ತೆರಳುತ್ತಿದ್ದ ವೇಳೆ ಶಂಕರನಾರಾಯಣ ಗ್ರಾಮದ ಕಲ್ಲದ್ದೆ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಸಚಿನ್ ಅವರು ಒಬ್ಬರೇ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಸ್ನೇಹಿತ ಚಿಂತಾಮಣಿಯ ರಾಹುಲ್  ಮಾದರ್‌ ಮತ್ತು ಬಸವ ಕಿರಣ ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದರು. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯವಾಗಿದ್ದ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಿದ್ದಾಪುರ ಮೆಸ್ಕಾಂ ಶಾಖೆಗೆ 2022ರಲ್ಲಿ ಕರ್ತವ್ಯಕ್ಕೆ ಸೇರಿದ್ದ ಅವರು ಮೂರು ವರ್ಷ ತರಬೇತಿ ಅವಧಿ ಮುಗಿಸಿ ಕಳೆದ 3 ತಿಂಗಳ ಹಿಂದೆ ಖಾಯಂಗೊಂಡಿದ್ದರು.

ಸಚಿನ್ ಕಲ್ಲಪ್ಪ ಸಂಕ್ರಟ್ಟಿ ಅವರು ಬೆಳಗಾವಿ ಜಿಲ್ಲೆಯ ಅಥನಿ ತಾಲೂಕಿನ ಬಾಳೆಗೇರೆಯವರಾಗಿದ್ದು.ನಾಲ್ಕು ಮಂದಿ ಮಕ್ಕಳಲ್ಲಿ ಅವರು ಕೊನೆಯವರು. ಅವರಿಗೆ ಮೂವರು ಸಹೋದರಿಯರಿದ್ದಾರೆ. ಸಹೋದರಿಯರಿಗೆ ಮದುವೆ ಯಾಗಿದ್ದು ಸಚಿನ್ ಅವಿವಾಹಿತ ರಾಗಿದ್ದರು.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಶರೀರವನ್ನು ಹುಟ್ಟೂರಿಗೆ ಕಳುಹಿಸಲಾಗಿದೆ.ಚಿಂತಾಮಣಿಯ ರಾಹುಲ್ ಆರ್. ಮಾದರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

Related Articles

Back to top button
error: Content is protected !!