ಇತರೆ

ಕುಂದಾಪುರ:ಬಸ್ಸಿನಲ್ಲಿ ಮಹಿಳೆಯ ಚಿನ್ನದ ಕರಿಮಣಿ ಸರ ಕಳವು

Views: 514

ಕುಂದಾಪುರ: ಮುಳ್ಳಿಕಟ್ಟೆಯಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಕರಿಮಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಕುಂದಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕುಂದಬಾರಂದಾಡಿ ಗ್ರಾಮದ ಸಾಕು (50) ಅವರು ಮುಳ್ಳಿಕಟ್ಟೆಯಲ್ಲಿ ಬಸ್ಸಿಗೆ ಬೆಳಗ್ಗೆ ಹತ್ತಿದ್ದು, ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಬಸ್ಸಿನಿಂದ ಇಳಿದಾಗ ಕುತ್ತಿಗೆಯಲ್ಲಿ ಧರಿಸಿದ್ದ 24 ಗ್ರಾಂ ತೂಕದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವಾಗಿದೆ.

ಬಸ್ಸಿನಲ್ಲಿ ಯಾರೋ ಚಿನ್ನದ ಕರಿಮಣಿಯನ್ನು ಕಳವುಗೈದಿರುವುದಾಗಿ ಕುಂದಾಪುರ ಠಾಣೆಯಲ್ಲಿ ಸಾಕು ಅವರು ದೂರು ನೀಡಿದ್ದಾರೆ.

 

Related Articles

Back to top button
error: Content is protected !!