ಕುಂದಾಪುರದಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

Views: 0
ಕುಂದಾಪುರ: ರೋಜರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮೇರಿ ಮಾತೆಯ ಗ್ರೊಟ್ಟೊ ಎದುರುಗಡೆ ಹೊಸ ಬೆಳೆ ಭತ್ತದ ತೆನೆಗಳನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಶೀರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು.
ಆಲಂಕೃತ ಬಾಲ ಮೇರಿ ಮಾತೆಯ ಪುತ್ಥಳಿಗೆ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ಬ್ಯಾಂಡು ವಾದ್ಯದೊಂದಿಗೆ ಭಕ್ತಿ ಗಾಯನ ಮೂಲಕ ಮೆರವಣಿಗೆ ಮೂಲಕ ಇಗರ್ಜಿಗೆ ಬಂದು ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿಯ ನಿರ್ದೇಶಕರರಾದ ವಂ|ಧರ್ಮಗುರು ಸಿರಿಲ್ ಲೋಬೊ ಅವರು ಮೇರಿ ಮಾತೆ ಏನೆಂದು ತಿಳಿದುಕೊಳ್ಳಬೇಕಿದ್ದರೆ, ನಾವು ಯೇಸುನ್ನು ಹೆಚ್ಚು ಅರಿಯಬೇಕು. ಪ್ರತಿಯೊಬ್ಬ ಹೆಣ್ಣು ಮೇರಿ ಮಾತೆಯಂತೆ ಸಚ್ಚಾರಿತ್ರ್ಯ ಹೆಣ್ಣಾಗಬೆಕು. ಮೇರಿ ಮಾತೆ ಗೋದಲಿಯಿಂದ ಹಿಡಿದು, ಕಾಲ್ವಾರಿ ಪರ್ವತದ ಶಿಲುಭೆಯ ತನಕ ಯೇಸುವಿಗೆ ಜೊತೆ ನೀಡಿದವಳು. ನಾವು ಈ ಮಹಾ ಮಾತೆಯ ಜನ್ಮ ದಿನಕ್ಕೆ ಹೊಸ ಬೆಳೆಯನ್ನು ದೇವರಿಗೆ ಕೃತಜ್ಞತಾ ಪುರ್ವಕವಾಗಿ ಸಮರ್ಪಿಸಿ ತೇನೆ ಹಬ್ಬವನ್ನು ಆಚರಿಸುತ್ತೇವೆ, ಈ ಹಬ್ಬ ವು ನಮ್ಮ ನಾಡಿನ ಭಾಷೆಗೆ, ಭೂಮಿ, ಜಲ, ನದಿಗಳಿಗೆ ಗೌರವ ಕೊಟ್ಟು ಈ ಹಬ್ಬ ಆಚರಿಸೋಣ. ಮೇರಿ ಮಾತೆ ಅಥವಾ ಸಂತರುಗಳು ಕೇವಲ ನಾವು ಮೂರ್ತಿ ಪೂಜೆ ಮಾಡುವುದು ಬೇಡ, ಅವರಿಗೆ ಗೌರವ ನೀಡಿ ಬೇಡಿರಿ, ಅವರು ನಮ್ಮ ನಿವೇದನೆಗೆ ಯೇಸು ಸ್ವಾಮಿಯಿಯ ಮೂಲಕ ಬಗೆಹರಿಸುತ್ತಾರೆ ಎಂಬುದು ಅರಿಯೋಣ. ಈ ಹಬ್ಬ ಹೆಣ್ಣುಮಕ್ಕಳ ಹಬ್ಬವೆಂದೂ ಆಚರಿಸುತ್ತಾರೆ ಕಾರಣ ಮೇರಿ ಮಾತೆ ಪಾಪ ಕಳಂಕರಹಿತಳು, ಮೇರಿ ಮಾತೆ ಎಲ್ಲರಿಗೂ ಆದರ್ಶೆ, ಅವಳ ಆದರ್ಶವನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಬೇಕು” ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಇದ್ದರು.






