ಇತರೆ
ಕುಂದಾಪುರದಲ್ಲಿ ಕುಸಿದು ಬಿದ್ದು ಬಸ್ರೂರಿನ ವ್ಯಕ್ತಿ ಸಾವು

Views: 461
ಕುಂದಾಪುರ: ಬಸ್ರೂರು ಗ್ರಾಮದ ನಿವಾಸಿಯೊಬ್ಬರು ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಅಸ್ವಸ್ಥಗೊಂಡು, ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟವರು ಬಸ್ರೂರಿನ ರತ್ನಾಕರ (35) ಎಂದು ಗುರುತಿಸಲಾಗಿದೆ.
ಕೂಡಲೇ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ರತ್ನಾಕರ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇವರು ಲೋ ಬಿಪಿಗೆ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 15 ದಿನಗಳಿಂದ ಸರಿಯಾಗಿ ಔಷಧ ತೆಗೆದುಕೊಳ್ಳದೇ ಇರುವುದರಿಂದ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಸಹೋದರ ನಿತೇಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






