ಇತರೆ

ಕುಂದಾಪುರ:ತಲ್ಲೂರು ಸೇತುವೆ ಬಳಿ ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು

Views: 197

ಕನ್ನಡ ಕರಾವಳಿ ಸುದ್ದಿ:ತಲ್ಲೂರು ಸೇತುವೆ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ  ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಜ. 15ರಂದು ಬೆಳಗಿನ ಜಾವ ಸಂಭವಿಸಿದೆ.

ಹೊನ್ನಾವರ ತಾಲೂಕಿನ ಗೇರುಸೊಪ್ಪದ ಮೇಘನಾಥ (39) ಸಾವನ್ನಪ್ಪಿದವರು.

ಕೆಲಸ ಮುಗಿಸಿ, ತ್ರಾಸಿಯಲ್ಲಿನ ತನ್ನ ಅಕ್ಕನ ಮನೆಗೆ ತೆರಳಲು ಬಸ್‌ ಸಿಗದೇ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಡಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದೆ.

ವ್ಯಕ್ತಿಯ ಮೈಕೈಗೆ, ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಸೇರಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಆಸ್ಪತ್ರೆಗೆ ಬರುವಾಗಲೇ ಮೇಘನಾಥ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!