ಇತರೆ

ಕುಂದಾಪುರ:ಕಂಬದಕೋಣೆಯಲ್ಲಿ ರಸ್ತೆ ಅಪಘಾತ, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು, ಹಿಂಬದಿ ಸವಾರ ಗಂಭೀರ

Views: 147

ಕನ್ನಡ ಕರಾವಳಿ ಸುದ್ದಿ: ಕಂಬದಕೋಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿ, ಹಿಂಬದಿ ಸವಾರ ಗಂಭೀರ ಗಂಭೀರ ಗಾಯಗೊಂಡ ಘಟನೆ ಡಿಸೆಂಬರ್ 31 ರಂದು ಸಂಭವಿಸಿದೆ.

ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನನ್ನು ಉಪ್ಪುಂದ ಶಾಲೆಬಾಗಿಲು ಸಮೀಪದ ಫಿಶರೀಸ್ ಕಾಲೋನಿ ನಿವಾಸಿ ಪರಮೇಶ್ವರ ಖಾರ್ವಿ ಎಂಬುವರ ಪುತ್ರ ಭುವನ್ (19), ಉಪ್ಪುಂದ ಗ್ರಾಮದ ಗಿರಿಜಾ ಖಾರ್ವಿ ಅವರ ಪುತ್ರ ಮಧುಸೂಧನ್ (20) ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭುವನ್ ಹಾಗೂ ಮಧುಸೂಧನ್ ಬೈಕ್ ನಲ್ಲಿ ಉಡುಪಿಯಿಂದ ಉಪ್ಪುಂದಕ್ಕೆ ಬರುತ್ತಿದ್ದರು. ಕಂಬದಕೋಣೆಯಲ್ಲಿ ಬರುತ್ತಿದ್ದ ಸಮಯದಲ್ಲಿ ಟಾಟಾ ಏಸ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದು, ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಟಾಟಾ ಏಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಭುವನ್ ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರನಿಗೆ ತಲೆ, ಎದೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.

ಘಟನಾ ಸ್ಥಳಕ್ಕೆ ಸಿಪಿಐ ಶಿವಕುಮಾರ್, ಪಿಎಸ್‌ಐ ಸುನೀಲ್ ಕುಮಾ‌ರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!