ಜನಮನ
ಕಾಳಾವರದಲ್ಲಿ ಕಾರು ಡಿಕ್ಕಿ :ಲೂನಾ ಸವಾರ ಸಾವು

Views: 0
ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರದಲ್ಲಿ ಭಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಲೂನಾ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ನರಸಿಂಹ ಶೆಟ್ಟಿ (75) ಮೃತಪಟ್ಟವರು. ಕಾಳಾವರ ಸರ್ಕಾರಿ ಶಾಲೆಯ ಸಮೀಪದ ಅಡ್ಡರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ನರಸಿಂಹ ಶೆಟ್ಟಿ ಮುಖ್ಯ ರಸ್ತೆಗೆ ಹಠಾತ್ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ.
ಕೋಟೇಶ್ವರದಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರು ಹಠಾತ್ ಅಡ್ಡ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ರಸ್ತೆ ಬದಿಯ ಕಲ್ಲು ಕಂಬಕ್ಕೆ ಗುದ್ದಿದೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ಸವಾರ ನರಸಿಂಹ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.






