ಜನಮನ

ಕಾಲೇಜಿನ ಪ್ರಾಂಶುಪಾಲ ಆತ್ಮಹತ್ಯೆಗೆ ಶರಣು

Views: 2

ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.

56 ವರ್ಷದ ನಾಗರಾಜ್ ಮುದಗಲ್ ಆತ್ಮಹತ್ಯೆಗೆ ಶರಣಾದ ಪ್ರಾಂಶುಪಾಲ. ಕಾಲೇಜಿನಲ್ಲಿ ಜಾನಪದ ಜಾತ್ರೆ ಹೊನ್ನ ಸಂಭ್ರಮ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿದೆಡೆ ತೆರಳಿ ಸ್ವತಃ ಪ್ರಾಂಶುಪಾಲರೇ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಂದಿದ್ದರು. ಆದರೆ ಇದೀಗ ಪ್ರಾಂಶುಪಾಲರು ನೇಣಿಗೆ ಕೊರಳೊಡ್ಡಿದ್ದಾರೆ.

ಜಾನಪದ ಜಾತ್ರೆಗಾಗಿ ಸಿದ್ಧತೆ ನಡೆಸಿದ್ದ ಕಾಲೇಜಿನಲ್ಲಿ ಸೂತಕದ ಛಾಯೆ ಆವರಿಸಿದೆ. ಪ್ರಾಂಶುಪಾಲರು ಆತ್ಮಹತ್ಯೆಗೆ ಕೈಗೊಳ್ಳಲು ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!