ಜನಮನ
ಕಾರ್ಕಳ :ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆ

Views: 4
ಕಾರ್ಕಳ: ನಂದಳಿಕೆ ಗ್ರಾಮದ ಮಾವಿನಕಟ್ಟೆ ದರ್ಖಾಸು ನಿವಾಸಿ ನಗರದ ಭುವನೇಂದ್ರ ಕಾಲೇಜಿನ ತೃತೀಯ ಬಿಎ ವಿದ್ಯಾರ್ಥಿನಿ ದೀಪಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರ ದಿಲೀಪ್ ಪೂಜಾರಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನ. 6ರಂದು ಬೆಳಗ್ಗೆ ಕಾಲೇಜಿಗೆಂದು ಹೋದವಳು ಮನೆಗೆ ವಾಪಸ್ ಬಂದಿಲ್ಲ. ಆಕೆಯನ್ನು ಸಂಬಂಧಿಕರು ,ಗೆಳೆಯರ ಮನೆಯಲ್ಲೆಲ್ಲ ಹುಡುಕಾಡಿದ್ದು ಪತ್ತೆಯಾಗದ ಹಿನ್ನೆಲೆಯಲ್ಲಿ ನಾಪತ್ತೆ ಬಗ್ಗೆ ದೂರು ಸಲ್ಲಸಲಾಗಿದೆ.
ನೀಲಿ ಬಣ್ಣದ ಚೂಡಿ ಧರಿಸಿದ್ದು, ಕಪ್ಪು ಬಿಳುಪು ಗೋಧಿ ಮೈಬಣ್ಣ ಕೋಲು ಮುಖದ ಚಹರೆ ಹೊಂದಿದ್ದಾಳೆ. ಈ ಚಹರೆಯ ಹುಡುಗಿ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






