ಇತರೆ

ಕಾರಿನೊಳಗೆ ನುಗ್ಗಿದ ಕಬ್ಬಿಣದ ರಾಡ್, ಚಾಲಕ ಸ್ಥಳದಲ್ಲೇ  ಸಾವು

Views: 114

ಕನ್ನಡ ಕರಾವಳಿ ಸುದ್ದಿ: ಹರಿಯಾಣದ ಗುರುಗ್ರಾಮ್‌ನ ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ.

ಕ್ಯಾಬ್‌ವೊಂದು ಟಿಎಂಟಿ ಕಬ್ಬಿಣದ ರಾಡ್‌ಗಳನ್ನು ತುಂಬಿಕೊಂಡಿದ್ದ ಇ-ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ರಾಡ್‌ಗಳು ಕಾರನ್ನು ಭೇದಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರಿನ ಹಿಂಭಾಗದಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ  ಇ-ರಿಕ್ಷಾದಲ್ಲಿ ಉದ್ದವಾದ ಟಿಎಂಟಿ ಕಬ್ಬಿಣದ ರಾಡ್‌ಗಳನ್ನು ಸಾಗಿಸಲಾಗುತ್ತಿತ್ತು. ಈ ರಾಡ್‌ಗಳು ವಾಹನದ ಹಿಂಭಾಗದಿಂದ ಬಹಳಷ್ಟು ಹೊರಗೆ ಚಾಚಿಕೊಂಡಿದ್ದವು ಎನ್ನಲಾಗಿದೆ. ಅದೇ ವೇಳೆ ವೇಗವಾಗಿ ಸಂಚರಿಸುತ್ತಿದ್ದ ಕ್ಯಾಬ್ ಇ-ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಬ್ಬಿಣದ ರಾಡ್‌ಗಳು ಕಾರಿನ ಮುಂಭಾಗವನ್ನು ಭೇದಿಸಿ ಒಳನುಗ್ಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇ-ರಿಕ್ಷಾ ಚಾಲಕ ಹಾಗೂ ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!