ಕಾಡಿನಿಂದ ಊರಿಗೆ ಬಂದ ಹುಲಿರಾಯ

Views: 13
ಕಾಡಿನಿಂದ ಸೀದಾ ಊರಿಗೆ ಬಂದ ಹುಲಿರಾಯ ಜನರ ಕೈಗೆ ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಅರ್ಧಂಬರ್ಧ ಕಾಮಗಾರಿ ಆಗಿರೋ ಕಾಂಪೌಂಡ್ ಮೇಲೆ ನಿಂತಿದ್ದ ವ್ಯಾಘ್ರ ಯಾರಿಗೂ ತೊಂದರೆ ಮಾಡಲಿಲ್ಲ. ತನ್ನದೇ ಖದರ್ನಲ್ಲಿ ಕಾಂಪೌಂಡ್ ಗೋಡೆ ಮೇಲೆ ನಿಂತ ಹುಲಿಯಣ್ಣ.. ಆಕಳಿಸ್ತಾ.. ತೂಕಡಿಸ್ತಾ.. ಸೇರಿದ್ದ ಜನರಿಗೆ ಪೋಸ್ ಕೊಡುತ್ತಾ ಸಡನ್ ಆಗಿ ಅದರ ಮೇಲೆ ಮಲಗಿಬಿಡ್ತಾನೆ.

ಹುಲಿಯನ್ನು ನೋಡಲು ಕಿಕ್ಕಿರಿದು ಜನವೋ..ಜನ ಮನೆಗಳ ಟೆರೇಸ್ ಮೇಲೇರಿ ಕುಳಿತ ಜನ. ಹುಲಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳೊ ಖುಷಿ ಒಂದೆಡೆಯಾದ್ರೆ, ನಮಗೇನೂ ಮಾಡ್ಬಿಡುತ್ತೋ ಅನ್ನೋ ಗಾಬರಿ ಮತ್ತೊಂದೆಡೆ. ಊರಿನ ಮಧ್ಯೆಯೇ ಹೀಗೆ ರಾಜಾರೋಷವಾಗಿ ಮಲಗಿರೋ ಹುಲಿರಾಯನನ್ನು ನೋಡಿದ ಜನರು ಫುಲ್ ಶಾಕ್ ಆಗಿದ್ದಾರೆ.
ಉತ್ತರ ಪ್ರದೇಶದ ಫಿಲಿಬಿತ್ ಜಿಲ್ಲೆಯ ಅಟ್ಕೋನಾ ಹಳ್ಳಿಯಲ್ಲಿ ಕಂಡುಬಂದ ದೃಶ್ಯ ಇದು. ರಾತ್ರಿಯಿಡೀ ಈ ಗ್ರಾಮದ ಗುರುದ್ವಾರ ಗೋಡೆ ಮೇಲೆ ಹುಲಿರಾಯ ಫುಲ್ ರೆಸ್ಟ್ ತಗೊಂಡಿದ್ದಾನೆ. ಬೆಳಗ್ಗೆ ಜನರು ಬಂದು ನೋಡಿ ಗಾಬರಿಯಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ಹೋಗಿದ್ದು, ಅಲ್ಲಿಗೆ ಬಂದ ಸಿಬ್ಬಂದಿ ಹುಲಿಯಣ್ಣನ ಸುತ್ತಲೂ ನೆಟ್ ಅಳವಡಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಆರಾಮಾಗಿ ಸಿಕ್ಕ ಸಿಕ್ಕ ಕಡೆ ಕೂತು ಹುಲಿಯಣ್ಣ ನಿದ್ದೆ ಹೊಡೆಯೋದನ್ನೇ ನೋಡಿ ಖುಷಿಪಟ್ಟಿದ್ದಾರೆ.
ಹೀಗೆ 7-8 ಗಂಟೆಗಳ ಹುಲಿರಾಯ ಈ ಗೋಡೆಯ ಮೇಲೆ ಕುಳಿತಿದ್ದು. ಹೀಗೆ ಗೋಡೆ, ಮನೆ ಟೆರೇಸ್ ಮೇಲೆ ಓಡಾಡುತ್ತಿದ್ದ ಹುಲಿರಾಯನನ್ನು ಕೊನೆಗೆ ಬರೀ ಕೈಯಲ್ಲೇ ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಸುರಕ್ಷಿತವಾಗಿ ಬೋನಿಗೆ ಹಾಕಿರುವ ರಕ್ಷಣಾ ಸಿಬ್ಬಂದಿ ಹುಲಿರಾಯನ ಜನವಸತಿ ಪ್ರದೇಶದಿಂದ ಸ್ಥಳಾಂತರ ಮಾಡಿದ್ದಾರೆ. ಹುಲಿರಾಯ ಗೋಡೆಯ ಮೇಲೆ ಆಕಳಿಸಿ, ತೂಕಡಿಸುತ್ತಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.






