ಕ್ರೀಡೆ

ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ಮೇಲೆ ಪತ್ನಿ ಗಂಭೀರ ಆರೋಪ ನನ್ನ ಪತಿ ಸಲಿಂಗಕಾಮಿ ಎಂದು!

Views: 144

ಕನ್ನಡ ಕರಾವಳಿ ಸುದ್ದಿ: ಎರಡು ದಿನಗಳ ಹಿಂದಷ್ಟೇ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ಮೇಲೆ ಅವರ ಪತ್ನಿ, ಮಾಜಿ ಮಹಿಳಾ ಬಾಕ್ಸರ್ ಸವೀಟಿ ಬೂರಾ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ ವಿಡಿಯೊವೊಂದು ವೈರಲ್‌ ಆಗಿತ್ತು. ಇದೀಗ ಪತಿಯ ವಿರುದ್ಧ ಸವೀಟಿ ಬೂರಾ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಅಳುತ್ತಾ ವಿಡಿಯೊ ಮೂಲಕ ಮಾತನಾಡಿದ ಸವೀಟಿ ಬೂರಾ,’ಎಲ್ಲರೂ ಸೇರಿ ನಾನೇ ತಪ್ಪು ಮಾಡಿರುವ ಹಾಗೆ ಬಿಂಬಿಸುತ್ತಿದ್ದಾರೆ. ಪೊಲೀಸರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ನಾನು ಠಾಣೆಯಲ್ಲಿ ದೀಪಕ್‌ ಮೇಲೆ ಹಲ್ಲೆ ನಡೆಸಿದ ವಿಡಿಯೊವನ್ನು ಬೇಕಂತಲೇ ವೈರಲ್‌ ಮಾಡಲಾಗಿದೆ. ನಾನು ಹಲ್ಲೆ ಮಾಡುವ ಮುಂದೆ ಅಲ್ಲಿ ಏನಾಗಿತ್ತು ಎನ್ನುವ ವಿಡಿಯೊವನ್ನು ಏಕೆ ವೈರಲ್‌ ಮಾಡಿಲ್ಲ. ದೀಪಕ್ ಹೂಡಾ ಸಲಿಂಗಕಾಮಿ. ಇದಕ್ಕೆ ಬೇಕಾದ ಎಲ್ಲ ಸಾಕ್ಷಿಗಳು ನನ್ನ ಬಳಿ ಇದೆ ಎಂದು’ ಎಂದು ಆರೋಪಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ದೀಪಕ್ ಹೂಡಾ ಫಾರ್ಚೂನರ್ ಕಾರು ಮತ್ತು ಒಂದು ಕೋಟಿ ರೂ. ವರದಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಸವೀಟಿ ಬೋರಾ ಪೊಲೀಸ್ ಠಾಣೆಗೆ ದೂರು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯ ಆರೋಪಕ್ಕೆ ಪ್ರತಿಯಾಗಿ ದೀಪಕ್ ಕೂಡ ಕೂಡ ತನ್ನ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಮತ್ತು ಮೋಸದ ಆರೋಪ ಮಾಡಿ ದೀಪಕ್‌ ಕೂಡ ಪ್ರತಿ ದೂರು ಸಲ್ಲಿಸಿದ್ದರು.

Related Articles

Back to top button
error: Content is protected !!