ಸಾಂಸ್ಕೃತಿಕ

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ…ಈ ಕಾರಣಕ್ಕೆ ಡಿವೋರ್ಸ್‌ ಕೊಟ್ಟೆ ಎಂದ ಚಂದನ್!

Views: 154

ಬೆಂಗಳೂರು: ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಚಂದನ್ ಅವರು ಡಿವೋರ್ಸ್ ಪಡೆಯಲು ಬೇರೆ ಯಾವುದೇ ಕಾರಣಗಳಿಲ್ಲ. ನಾವು ಮದುವೆಯಾದ 4 ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಬೆಳೆದ ರೀತಿನೇ ಬೇರೆ. ನನ್ನ ಜೀವನ ಶೈಲಿನೇ ಬೇರೆಯಾಗಿದೆ. ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿಯೇ ಬೇರೆ. ನಿವೇದಿತಾ ಜೀವನ ಶೈಲಿ ಬೇರೆ ಇದೆ. ಈ ಬೇರೆ, ಬೇರೆ ರೀತಿ ವರ್ಷಗಳೇ ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕೆ ದೂರಾಗಲು ಮುಂದಾಗಿದ್ದೇವೆ ಅಷ್ಟೇ ಬೇರೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

ಹಲವು ವದಂತಿಗಳಿಗೆ ತೆರೆ ಎಳೆದಿರುವ ಚಂದನ್ ಹಾಗೂ ನಿವೇದಿತಾ ಅವರು ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಏನೂ ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ ವಿಚ್ಛೇದನ ಬೇಕಿತ್ತು. ಈ ಕಾರಣಕ್ಕೆ ನಾವು ಬೇರೆ, ಬೇರೆ ಆಗಿದ್ದೇವೆ. ಇಬ್ಬರು ಒಮ್ಮತದಿಂದ ದೂರ ಆಗಿದ್ದೀವಿ ಎಂದು ಸುದ್ದಿಗೋಷ್ಟಿಯಲ್ಲಿ ಇಬ್ಬರು ಸ್ಪಷ್ಟಪಡಿಸಿದ್ದಾರೆ.

 

 

Related Articles

Back to top button
error: Content is protected !!