ಜನಮನ

ಏ.10 ರಿಂದ ನಗದು ಪಾವತಿ ಇಲ್ಲ, ಇನ್ಮುಂದೆ ಟೋಲ್‌ಗಳಲ್ಲಿ ಸಂಚಾರ ಸರಾಗ

Views: 107

ಕನ್ನಡ ಕರಾವಳಿ ಸುದ್ದಿ: ಟೋಲ್ ಬೂತ್‌ಗಳಲ್ಲಿ ವಾಹನಗಳ ಸಾಲನ್ನು ತಪ್ಪಿಸುವುದಕ್ಕಾಗಿ ಈ ತಿಂಗಳ 10ರಿಂದ ನಗದು ಪಾವತಿಯನ್ನು ಸ್ಥಗಿತಗೊಳಿಸುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇ ಪ್ರಯಾಣಿಕರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ, ಶುಲ್ಕ ವಿನಾಯ್ತಿ ಕೋರುವ ಸಂಪ್ರದಾಯ ಕೂಡ ಅಂತ್ಯವಾಗಲಿದೆ.

ಸಾರಿಗೆ ಸಚಿವಾಲಯ ಈಗಾಗಲೇ ಸರಕಾರಿ ಸಂಸ್ಥೆಗಳು ಮತ್ತು ಕಚೇರಿಗಳು ಶುಲ್ಕ ವಿನಾಯ್ತಿ ಫಾಸ್ಟ್ಯಾಗ್‌ಗಳನ್ನು ಪಡೆಯಲು ಅಥವಾ ವಾರ್ಷಿಕ ಫಾಸ್ಟ್ರಾಗ್ ಪಾಸ್‌ಗಳನ್ನು ಪಡೆಯುವಂತೆ ಸೂಚಿಸಿದೆ. ವಿನಾಯ್ತಿ ವರ್ಗದ ಅಡಿಯಲ್ಲಿ ಬರುವ ಎಲ್ಲ ವಾಹನಗಳು ಈ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಎಲ್ಲ ಖಾಸಗಿ ಕಾರುಗಳಿಗೆ ವಾರ್ಷಿಕ ಪಾಸ್ ದರ 3,075 ರುಪಾಯಿ ಆಗಿರುತ್ತದೆ ಹಾಗೂ 200 ಟೋಲ್ ಪ್ಲಾಜಾಗಳನ್ನು ದಾಟಲು ಅವಕಾಶ ಇರುತ್ತದೆ. ಒಂದು ವೇಳೆ ವಾಹನಕ್ಕೆ ಅಧಿಕೃತ ಫಾಸ್ಟಾಗ್ ಇಲ್ಲದಿದ್ದರೆ,

ಚಾಲಕ ಅಥವಾ ಮಾಲೀಕ ಟೋಲ್ ಶುಲ್ಕವನ್ನು ಯುಪಿಐ ಮೂಲಕ ಪಾವತಿಸಲು ಅವಕಾಶವಿದೆ. ಇದು ಸಾಮಾನ್ಯ ಬಳಕೆದಾರರ ಶುಲ್ಕದ 1.25 ಪಟ್ಟು ಆಗಿರುತ್ತದೆ. ಒಂದು ವೇಳೆ ಯುಪಿಐ ಮೂಲಕವೂ ಪಾವತಿಸಲು ನಿರಾಕರಿಸಿದರೆ, ಅಂಥ ವಾಹನಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಯ 14ನೇ ನಿಯಮದ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ವಾಹನಗಳಿಗೆ ಟೋಲ್ ಪ್ಲಾಜಾ ಪ್ರವೇಶವನ್ನು ನಿರ್ಬಂಧಿಸಲು ಹಾಗೂ ರಾಷ್ಟ್ರೀಯ ಹೆದ್ದಾರಿ ಸೆಕ್ಷನ್ ನಿಂದ ಅದನ್ನು ತೆರವುಗೊಳಿಸಲು ಅವಕಾಶ ಇರುತ್ತದೆ.ಮತ್ತು ಸಿಬ್ಬಂದಿಯ ನಡುವಿನ ಸಂಘರ್ಷವನ್ನು ಕೂಡ ತಪ್ಪಿಸಲಿದೆ. ಅಲ್ಲದೆ ಸರಾಗ ಪ್ರಯಾಣಕ್ಕೆ ತಡೆಯಾಗುವ ರೀತಿಯಲ್ಲಿ ಟೋಲ್ ಬೂತ್‌ಗಳಲ್ಲಿ ವಾಹನಗಳ ಸರದಿ ಸಾಲು ನಿರ್ಮಾಣವಾಗುವುದನ್ನು ತಡೆಯಲಿದೆ.

Related Articles

Back to top button
error: Content is protected !!