ಜನಮನ

ಎಲ್ಲರೂ-ಎಲ್ಲರಿಗಾಗಿ ಘೋಷಣೆ ‘ನೈಜ ಸ್ವಾತಂತ್ರ್ಯ’ ಅಭಿವೃದ್ಧಿಯ ಮಂತ್ರವಾಗಲಿ

Views: 1

ಬ್ರಿಟಿಷರ 350 ವರ್ಷಗಳ ಕರಾಳ ದಾಸ್ಯದಿಂದ ಮುಕ್ತರಾಗಿ ಹಿರಿಯರು ನಡೆಸಿದ ಹೋರಾಟದಿಂದ ಬಳುವಳಿಯಾಗಿ ಬಂದ ಸ್ವಾತಂತ್ರ್ಯ ಇದೀಗ 77ರ ಸಂಭ್ರಮದಲ್ಲಿದ್ದೇವೆ.

ಒಂದು ದೇಶವಾಗಿ ನೋಡಿದಾಗ ಅದು ಸಾಗುತ್ತಿರುವ ಹಾದಿ ನೆಮ್ಮದಿಯನ್ನು ಕೊಡುತ್ತಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಆರ್ಥಿಕತೆ ಎಲ್ಲಾ ಕ್ಷೇತ್ರಗಳಲ್ಲೂ ಇವತ್ತು ಭಾರತ ಜಗತ್ತಿಗೆ ಸ್ಪರ್ಧಿಸಿ ಉಳಿದ ದೇಶಗಳಿಗೆ ಮಾದರಿಯಾಗಿದೆ.

ಒಂದು ಕಾಲದಲ್ಲಿ ನಾವು ಯಾರದೋ ಮುಂದೆ ಹಣಕ್ಕಾಗಿ ಕೈ ಚಾಚುವ ಸಂದರ್ಭವಿತ್ತು. ಆದರೆ ಈಗ ನಾವು ಕೆಲವರನ್ನು ಸಾಕುವಂತಹ ತಾಕತ್ತು ನಮ್ಮಲ್ಲಿದೆ.

ಭಯೋತ್ಪಾದನೆ, ವಂಚನೆ, ಭ್ರಷ್ಟಾಚಾರ ಅಳಿದು ಯುವ ಜನತೆಯಲ್ಲಿ ನಂಬಿಕೆ, ಪ್ರೀತಿ, ಪ್ರಾಮಾಣಿಕತೆಗಳು ಮೊಳೆತರೆ ನಮ್ಮ ದೇಶ ಇನ್ನಷ್ಟು ಎತ್ತರಕ್ಕೆ ಏರಬಹುದಿತ್ತು. ಆದರೆ, ನಮ್ಮಲ್ಲಿ ತ್ಯಾಗ ಮನೋಭಾವನೆ, ಸತ್ಯ, ತತ್ವ- ಸಿದ್ಧಾಂತ ಆದರ್ಶಕತೆಯನ್ನು ನಾವು ಪಾಲಿಸುತ್ತಿಲ್ಲ.

ಜಾತ್ಯಾತೀತದ ನೆರಳಿನಲ್ಲಿ ಮಿತ್ಯಾ ಜಾತ್ಯಾತೀತರಾಗಿ ಬಣ್ಣ ಬದಲಾಯಿಸಿಕೊಳ್ಳುತ್ತಿರುವುದು ಸ್ವಾತಂತ್ರ್ಯದ ನಿಜ ಅರ್ಥಕ್ಕೆ ಕಪ್ಪು ಚುಕ್ಕಿ,

ಅಧಿಕಾರ, ಹಣ, ಜಾತಿ, ಧರ್ಮಗಳ ವ್ಯವಸ್ಥೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಗದ್ದುಗೆಗೆ ಏರುವುದು ಇಂದು ಮೊದಲ ರಾಜಕೀಯ ಪ್ರಾಶಸ್ತ್ಯ.

ಆದರ್ಶ ಎಂದರೆ ಯಾವುದು.. ಆದರ್ಶ ರಾಜಕಾರಣಿಗಳು ಯಾರು?

ಮಹಾತ್ಮ ಗಾಂಧಿ, ಗೋಪಾಲ ಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯ, ಭಗತ್ ಸಿಂಗ್, ಸುಭಾಷಚಂದ್ರ ಬೋಸ್, ರವೀಂದ್ರನಾಥ್ ಟಾಗೂರ್, ಅರವಿಂದ ಘೋಷ್, ಸರೋಜಿನಿ ನಾಯ್ಡು, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ ಇವರ ಆದರ್ಶಕತೆ ನಮಗೆ ಬೇಡ ನಮ್ಮ ಕಣ್ಣು ಮುಂದೆ ಕಾಣುತ್ತಿರುವವರು ಸಿನಿಮಾ ನಾಯಕರು, ಕ್ರೀಡಾ ನಾಯಕರು, ಹಣ ಇರುವ ಜನಪ್ರಿಯ ವ್ಯಕ್ತಿಗಳು.

ಆದರೆ ನಿಜವಾದ ಸ್ವಾತಂತ್ರ್ಯದ ಅರ್ಥ ನಾವು ತಿಳಿದುಕೊಳ್ಳಬೇಕಾಗುತ್ತದೆ ಎಲ್ಲರೂ ಎಲ್ಲರಿಗೂ ಎಂಬ ಘೋಷಣೆ ಅಭಿವೃದ್ಧಿಯ ಮಂತ್ರವಾಗಬೇಕು.

ನೀನು ಅನುಭವಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಮತ್ತೊಬ್ಬನು ಅನುಭವಿಸಲು ಅವಕಾಶ ಮಾಡಿಕೊಡುವುದೇ ನಿಜವಾದ ಸ್ವಾತಂತ್ರ್ಯ

ಸ್ವಾತಂತ್ರ್ಯ ಮತ್ತು ಸಮಾನತೆ ಪೂರಕವಾಗಿದ್ದು, ಎಲ್ಲಿ ಸ್ವಾತಂತ್ರ್ಯವಿದೆಯೋ ಅಲ್ಲಿ ಸಮಾನತೆ ಇದೆ ಎಂದರ್ಥ

ಸ್ವಾತಂತ್ರ್ಯದ ಎರಡು ದೃಷ್ಟಿಕೋನಗಳು

ನಕರಾತ್ಮಕ ಸ್ವಾತಂತ್ರ್ಯ ವ್ಯಕ್ತಿಗೆ ಅವನ ಇಚ್ಛಾನುಸಾರವಾಗಿ ವರ್ತಿಸುವ ಅಪರಿಮಿತ ಸ್ವಾತಂತ್ರ್ಯ ಎಂದರ್ಥ ಅಂದರೆ ಇಲ್ಲಿ ಯಾವುದೇ ನಿರ್ಬಂಧ ಇಲ್ಲದಿರುವುದು ಆದರೆ ನಾವು ಅನುಭವಿಸುವ ಕಾನೂನನ್ನು ಅಪರಿಮಿತವಾಗಿಸಿಕೊಂಡು ಹೆಚ್ಚಾಗಿ ವರ್ತಿಸುವುದರಿಂದ ನಿಜವಾದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ.

ಸಕಾರಾತ್ಮಕ ಸ್ವಾತಂತ್ರ್ಯ ವ್ಯಕ್ತಿಗೆ ಅವನ ವ್ಯಕ್ತಿತ್ವವನ್ನು ವಿಕಾಸ ಪಡಿಸಲು ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು. ಇದು ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ ಇರುವ ಎಲ್ಲಾ ಅಡೆತಡೆಗಳನ್ನು ಕಾನೂನಿನ ಮೂಲಕ ನಿವಾರಿಸುವುದು. ಹೀಗೆ ನಿರ್ಬಂಧದಿಂದ ಕೂಡಿದ ಸ್ವಾತಂತ್ರ್ಯ ವ್ಯಕ್ತಿಯ ಸಮಾಜದ ರಾಜ್ಯದ ಹಿತವನ್ನು ಕಾಪಾಡಬಲ್ಲದು.

ನೈಜ ಸ್ವಾತಂತ್ರ್ಯ ವ್ಯಕ್ತಿಯ ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುವ ನಿರ್ಬಂಧಗಳನ್ನು ತೊಡೆದು ಹಾಕಿ ಉತ್ತಮ ಜೀವನವನ್ನು ಅವಕಾಶ ಮಾಡಿಕೊಳ್ಳುವುದು ನೈಜ ಸ್ವಾತಂತ್ರ್ಯ

ಉದಾಹರಣೆಗೆ ರಾಜ್ಯದ ಕಲ್ಯಾಣ ಕಾರ್ಯಕ್ರಮಗಳಾದ ಉಚಿತ ಹಾಗೂ ಕಡ್ಡಾಯ ಶಿಕ್ಷಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿ

ವ್ಯಕ್ತಿಗೆ ಸ್ವಾತಂತ್ರ್ಯ ಇಲ್ಲದೆ ಇದ್ದಲ್ಲಿ ಗುಲಾಮನಿದ್ದಂತೆ ಬಹು ಸಂಖ್ಯಾತರ ಸರ್ವಾಧಿಕಾರ ವೃದ್ಧಿಸಿದಂತೆ ಅಲ್ಪಸಂಖ್ಯಾತರ ಸ್ವಾತಂತ್ರ್ಯ ಅದೃಶ್ಯವಾಗುತ್ತದೆ ಈ ನಿಟ್ಟಿನಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟ ನಡೆಸಿದ ಅಮೆರಿಕನ್ ಕ್ರಾಂತಿಕಾರಿ ನಾಯಕ ಹ್ಯಾಟ್ರಿಕ್ ಹೆನ್ರಿ ನನಗೆ ಸ್ವಾತಂತ್ರ್ಯ ಕೊಡಿ ಇಲ್ಲವೇ ನನಗೆ ಸಾವನ್ನು ಕೊಡಿ ಎಂದು ಘೋಷಣೆ ಮಾಡಿದ್ದು ಅಂದರೆ ವ್ಯಕ್ತಿಗೆ ಪ್ರಾಣ ಎಷ್ಟು ಮುಖ್ಯವೋ ವ್ಯಕ್ತಿಗೆ ಸ್ವಾತಂತ್ರ್ಯಅಷ್ಟೇ ಮುಖ್ಯ ಎಂದರ್ಥ

ಮಾನವ ಕೋಟಿಗೆ ಕ್ಷೇಮವನ್ನು ಉಂಟು ಮಾಡಬೇಕಾದರೆ ಈ ಪ್ರಕೃತಿಯ ದುರಾಸೆಯನ್ನು ಬಿಟ್ಟು ನಾನು ನನ್ನದು ಎಂಬ ಭಾವ ಬಿಟ್ಟು ಪ್ರಕೃತಿಯ ಆಸೆ ಪೂರೈಸಬೇಕಾದರೆ ಸದಾ ಸೇವೆ ಮಾಡುತ್ತಾ ಯಾವುದೇ ಪ್ರತಿಫಲ ಪ್ರತಿ ಸೇವೆಯನ್ನು ಬಯಸದೆ ಇರುವುದು.

1950 ಜನವರಿ 26ರಂದು ಭಾರತದ ಸಂವಿಧಾನ ರಚನೆಯಾಗಿ ಅದರ ಪೂರ್ವ ಪೀಠಿಕೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ನ್ಯಾಯ, ವಿಚಾರ, ಅಭಿವ್ಯಕ್ತ, ನಂಬಿಕೆ,ಸಮಾನತೆ, ಭ್ರಾತತ್ವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸವಿಂದಾನದಲ್ಲಿ ಸೇರಿಸಲಾಗಿದೆ. ಹಾಗೆಯೇ ಸಂವಿಧಾನದ 42ನೇ ತಿದ್ದುಪಡಿಯ ಅನ್ವಯ ಜಾತ್ಯಾತೀತ ರಾಷ್ಟ್ರ ಸೇರಿಸಲಾಗಿದ್ದು, ಇಲ್ಲಿ ಧಾರ್ಮಿಕ ಭಾವನೆಯಲ್ಲಿ ತಟಸ್ಥ ಎಲ್ಲಾ ಧರ್ಮ ಮತ್ತು ಜಾತಿಯನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕು.

ಕೋಟಿ ಕೋಟಿ ವಿದ್ಯೆ ಕಲಿತರು ತ್ಯಾಗ ಬುದ್ಧಿ ಇಲ್ಲದಿದ್ದಲ್ಲಿ ಕಲಿತ ವಿದ್ಯೆಗಳೆಲ್ಲ ನಿಷ್ಪ್ರಯೋಜಕ ಸಂಪಾದಿಸಿದ ವಿದ್ಯೆಯನ್ನು ಪರೋಪಕಾರದಿಂದ ಇತರರಿಗೆ ಸೇವೆ ಮಾಡುವ,ತ್ಯಾಗ ಮಾಡುವ ಮನೋಭಾವನೆ, ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಆದರ್ಶಕತೆ, ಪ್ರೀತಿ,ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯದ ಕನಸು ನನಸಾಗಬಹುದು.

ಸುಧಾಕರ ವಕ್ವಾಡಿ,

ಕನ್ನಡ ಕರಾವಳಿ

 

 

 

 

 

 

Related Articles

Back to top button
error: Content is protected !!