ಸಾಂಸ್ಕೃತಿಕ

ಉಪೇಂದ್ರ ನಿರ್ದೇಶನದ 25 ವರ್ಷಗಳ ಹಿಂದಿನ ಸಿನಿಮಾದೊಳಗೊಂದು ಸಿನಿಮಾ ‘A’ ಮರು ತೆರೆಗೆ, ಉಪೇಂದ್ರ ಫಾರ್ಮುಲಾ ಮತ್ತೆ ವರ್ಕೌಟ್ ಆಗುತ್ತಾ? 

Views: 57

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ ‘A’ 25 ವರ್ಷ ಪೂರೈಸಿದೆ. ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಒಂದರ್ಥದಲ್ಲಿ ತಮ್ಮದೇ ನಿಜಜೀವನದ ಕಥೆಯನ್ನು ತೆರೆಗೆ ತಂದು ಉಪೇಂದ್ರ ಸಕ್ಸಸ್ ಕಂಡಿದ್ದರು. “ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ” ಎಂದು ಹೇಳಿ ಪ್ರೇಕ್ಷಕರನ್ನು ಕೆಣಕಿ ರಿಯಲ್ ಸ್ಟಾರ್ ಜಾದೂ ಮಾಡಿದ್ದರು. ಅವತ್ತಿನ ಕಾಲಕ್ಕೆ ‘A’ ಸಿನಿಮಾ ತೆಲುಗಿಗೂ ಡಬ್ ಆಗಿ ಸೂಪರ್ ಹಿಟ್ ಆಗಿತ್ತು.

‘ತರ್ಲೆ ನನ್ಮಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಉಪೇಂದ್ರ ಮುಂದೆ ‘ಶ್’, ‘ಓಂ’ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟು ಸಕ್ಸಸ್ ಕಂಡಿದ್ದರು. ‘ಆಪರೇಷನ್ ಅಂತ’, ‘ಸ್ವಸ್ತಿಕ್’ ರೀತಿಯ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗಳಿಂದ ಗಮನ ಸೆಳೆದಿದ್ದರು. ನಿರ್ದೇಶಕನಾಗಿ ಒಳ್ಳೆ ಸ್ಟಾರ್‌ಡಮ್ ಸಂಪಾದಿಸಿದ್ದ ಉಪೇಂದ್ರ ಹೀರೊ ಆಗಲು ‘ಎ’ ಸಿನಿಮಾ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುತೇಕ ಹೊಸಬರೇ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಉಪೇಂದ್ರ ತಮ್ಮ ವಿಭಿನ್ನ ಕಥೆ ಹಾಗೂ ಸ್ಕ್ರೀನ್‌ಪ್ಲೇ ಇಂದ ಸಕ್ಸಸ್ ಕಂಡಿದ್ದರು.

ನಿರ್ದೇಶಕರಾಗಿದ್ದ ಉಪೇಂದ್ರ ಹೀರೊ ಆಗಬೇಕು ಎಂದುಕೊಂಡಾಗ ಚಿತ್ರದಲ್ಲೂ ಒಬ್ಬ ಸಿನಿಮಾ ನಿರ್ದೇಶಕನ ಕಥೆ ಹೇಳಿದ್ದರು. ಸಿನಿಮಾದೊಳಗೊಂದು ಸಿನಿಮಾ ಕಥೆ ಹೇಳಿದ್ದರು. ಜೀವನದಲ್ಲಿ ಏಳುಬೀಳು ಕಂಡ ಸೂರ್ಯ ಪ್ರೀತಿ ಎನ್ನುವುದು ಸುಳ್ಳು ಎಂದರೆ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ ಪ್ರೀತಿಯ ಬಗ್ಗೆ ಸೂರ್ಯನಿಗೆ ಪಾಠ ಮಾಡಲು ಬರ್ತಾಳೆ. ಇವರಿಬ್ಬರ ಸಂಘರ್ಷದ ಕಥೆಗೆ ಉಪ್ಪಿ ಇಟ್ಟ ಹೆಸರು ‘A’. ಸಿದ್ಧಸೂತ್ರಗಳನ್ನು ಮುರಿದ ‘A’ ‘A’ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ

ಬಹಳ ರಿಯಲಿಸ್ಟಿಕ್ ಆಗಿ ಚಿತ್ರವನ್ನು ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದರು. ರಿವರ್ಸ್ ಸ್ಕ್ರೀನ್‌ಪ್ಲೇ ಕಾರಣಕ್ಕೆ ಕಥೆ ಅರ್ಥವಾಗದೇ ಕೆಲವರು ಪದೇ ಪದೇ ಸಿನಿಮಾ ನೋಡಿದ್ದರು. 2007ರಲ್ಲಿ ಸಿನಿಮಾ ತಮಿಳಿಗೂ ರೀಮೆಕ್ ಆಗಿತ್ತು. ಕನ್ನಡ ಮೂವಿ ಟ್ರೈಲರ್ ಲಾಂಚ್. ವಿಭಿನ್ನ ಟೈಟಲ್, ಟ್ಯಾಗ್‌ಲೈನ್ ಸೆನ್ಸಾರ್ ಮಂಡಳಿ ವಯಸ್ಕರು ಮಾತ್ರ ನೋಡಬಹುದಾದ ಸಿನಿಮಾಗಳಿಗೆ ಎ ಸರ್ಟಿಫಿಕೇಟ್ ಕೊಡುತ್ತದೆ. ಆದರೆ ಉಪೇಂದ್ರ ತಮ್ಮ ಚಿತ್ರಕ್ಕೆ ‘A’ ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದರು. ಜೊತೆಗೆ ‘ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎಂದು ಟ್ಯಾಗ್ ಲೈನ್ ಕೊಟ್ಟಿದ್ದರು. ಪ್ರೇಕ್ಷಕರು ಬೈಯ್ಕೊಂಡ್ರು ಪರವಾಗಿಲ್ಲ, ನಮ್ಮ ಸಿನಿಮಾ ನೋಡಬೇಕು ಎನ್ನುವುದು ಉಪೇಂದ್ರ ಲೆಕ್ಕಾಚಾರ ಆಗಿತ್ತು. ಅದಾಗಲೇ ‘ಶ್‌’, ‘ಓಂ’ ಎನ್ನುವ ಒಂದಕ್ಷರದ ಟೈಟಲ್‌ಗಳನ್ನು ಇಟ್ಟು ಸಿನಿಮಾ ಮಾಡಿ ಗೆದ್ದಿದ್ದ ಉಪ್ಪಿ, ‘A’ ಎನ್ನುವ ಟೈಟಲ್ ಕೂಡ ಇಟ್ಟು ಗಮನ ಸೆಳೆದಿದ್ದರು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ‘ಎ’ ಕಲೆಕ್ಷನ್ ₹20 ಕೋಟಿ ಬಿ. ಜಗನ್ನಾಥ, ಬಿ. ಜಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಚಾಂದಿನಿ ನಾಯಕಿಯಾಗಿ ಉಪೇಂದ್ರಗೆ ಸಾಥ್ ಕೊಟ್ಟಿದ್ದರು. 25 ವರ್ಷಗಳ ಹಿಂದೆ 1.25 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ಎ’ ಚಿತ್ರ ಬರೋಬ್ಬರಿ 20 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ತೆಲುಗಿಗೂ ಡಬ್ ಆಗಿ 100 ದಿನ ಪ್ರದರ್ಶನ ಕಂಡು ಸಿನಿಮಾ ಎಲ್ಲರ ಹುಬ್ಬೇರಿಸಿತ್ತು.

ಕರ್ನಾಟಕದಲ್ಲಿ 25 ವಾರಗಳ ಕಾಲ ‘A ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ನಿರ್ದೇಶಕರಾಗಿ ಮಾತ್ರವಲ್ಲದೇ ಹೀರೊ ಆಗಿಯೂ ಉಪೇಂದ್ರ ಸಕ್ಸಸ್ ಕಂಡಿದ್ದರು.

ಇದೇ ಸಿನಿಮಾ ಮೂಲಕ ಗುರುಕಿರಣ್ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ಅಂದಾಜು ಎರಡ್ಮೂರು ಲಕ್ಷ ವೆಚ್ಚದಲ್ಲಿ ಸಿನಿಮಾ ಸಾಂಗ್ಸ್ ಸಿದ್ಧವಾಗಿತ್ತು. ಆದರೆ ಆಡಿಯೋ ಕ್ಯಾಸೆಟ್‌ ಬರೋಬ್ಬರಿ 2 ಕೋಟಿ ಹಣ ತಂದು ಕೊಟ್ಟಿತ್ತು. ‘ಮಾರಿ ಕಣ್ಣು ಹೋರಿಮ್ಯಾಗೆ’, ‘ಸುಮ್ ಸುಮ್ನೆ’, ‘ಹೇಳ್ಕೊಳ್ಳೊಕ್ ಒಂದೂರು’ ಹೀಗೆ ಎಲ್ಲಾ ಸಾಂಗ್ಸ್ ಸಿನಿರಸಿಕರ ಬಾಯಲ್ಲಿ ನಲಿದಾಡಿತ್ತು.

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ‘A’ ಚಿತ್ರವನ್ನು ಮರು‌ ಬಿಡುಗಡೆ ಮಾಡಿದ್ದಾರೆ

1998ರಲ್ಲಿ ರಿಲೀಸ್ ಆದ ‘A’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೇಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

ಯುಐ ಸಿನಿಮಾಗಾಗಿ ಕಾದು ಕುಳಿತವರಿಗೆ ‘A’ ಚಿತ್ರದ ಅಪ್‌ಡೇಟ್ ಸಿಕ್ಕಿದೆ. ಮತ್ತೆ ಉಪೇಂದ್ರ ಫಾರ್ಮುಲಾ ಮತ್ತೆ ವರ್ಕೌಟ್ ಆಗುತ್ತಾ? ಎಂದು ಕಾಯಬೇಕಿದೆ.

 

 

 

 

Related Articles

Back to top button
error: Content is protected !!