ಇತರೆ
ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದಿದ್ದ ಕೊಲ್ಲೂರು ಪೋಸ್ಟ್‌ಮೆನ್ ಆತ್ಮಹತ್ಯೆ
Views: 74
ಕನ್ನಡ ಕರಾವಳಿ ಸುದ್ದಿ: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್‌ಮೆನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.9ರಂದು ಬೆಳಗ್ಗೆ ಕೊಲ್ಲೂರಿನಲ್ಲಿ ನಡೆದಿದೆ.
ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್.(31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿ ನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು.ಫೆ.9 ರಂದು ಬೆಳಿಗ್ಗೆ ಪೋಸ್ಟ್ ಆಫೀಸಿಗೆ ಬಂದು ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಪೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






