ಕರಾವಳಿ

ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷ ಅಬ್ದುಲ್ ರೆಹಮಾನ್ ನಿಧನ

Views: 13

ಉಡುಪಿ: ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಸಮಾಜ ಸೇವಕ ಅಬ್ದುಲ್ ರೆಹಮಾನ್ ಮಣಿಪಾಲ(77) ಹೃದಯಾಘಾತದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ, ಮಹಾರಾಷ್ಟ್ರ ಅಪೆಕ್ಸ್ ಮೆನೇಜರ್ ಹಾಗೂ ಮಣಿಪಾಲ ಗ್ರೂಪ್‌ನಲ್ಲಿ ಡೆವಲಪ್‌ಮೆಂಟ್ ಮೆನೇಜರ್ ಆಗಿ ಸೇವೆ ಸಲ್ಲಿಸಿ  ನಿವೃತ್ತಿಯಾಗಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರೋಟರಿ ಕ್ಲಬ್ ಉಡುಪಿ- ಮಣಿಪಾಲ ಅಧ್ಯಕ್ಷರಾಗಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಸ್ಥಾಪಕ ಸದಸ್ಯರಾಗಿ, ಲಯನ್ಸ್ ಕ್ಲಬ್ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು. ಸಂತೋಷ್‌ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ ಇವರು, ಶಿವಮೊಗ್ಗದಲ್ಲಿ ಗಣಿತ ಶಿಕ್ಷಣರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಇವರು ಪತ್ನಿ, ಸಾಪ್ಟ್‌ವೇರ್ ಇಂಜಿನಿಯರ್ ಆಸೀಫ್ ಹುಸೇನ್, ಸೌದಿ ಅರೇಬಿಯಾದ ಸಾಫ್ಟ್‌ವೇರ್ ಇಂಜಿನಿಯರ್ ಮನ್ಸೂರು ಹಾಗೂ ಉದ್ಯಮಿ ಆರೀಫ್ ರೆಹಮಾನ್ ಸೇರಿದಂತೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.

Related Articles

Back to top button
error: Content is protected !!