ಇತರೆ

ಉಡುಪಿ: ಗಾರೆ ಕೆಲಸಕ್ಕೆ ಬಂದ ಅಣ್ಣ, ಪ್ರಥಮ ಪಿಯುಸಿ ಓದುತ್ತಿದ್ದ ತಂಗಿ ಇಬ್ಬರೂ ಆತ್ಮಹತ್ಯೆಗೆ ಶರಣು 

Views: 330

ಕನ್ನಡ ಕರಾವಳಿ ಸುದ್ದಿ: ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ ಓದುತ್ತಿದ್ದರು. ಸಹೋದರ ಸಂಬಂಧಿ ಮಲ್ಲೇಶ ವಾರದ ಹಿಂದಷ್ಟೇ ಗಾರೆ ಕೆಲಸಕ್ಕೆ ಎಂದು ಉಡುಪಿಗೆ ಬಂದಿದ್ದ. ತನ್ನ ತಾಯಿ ಮತ್ತು ಪವಿತ್ರಾ ತಾಯಿ ಹನುಮವ್ವ ಅಕ್ಕ-ತಂಗಿಯಾಗಿರುವ ಕಾರಣ ಚಿಕ್ಕಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ. ಹನುಮವ್ವ ರಾಯಚೂರಿಗೆ ಹೋಗಿದ್ದ ಸಂದರ್ಭ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದೆ.

 

Related Articles

Back to top button
error: Content is protected !!