ಕ್ರೀಡೆ
ಉಡುಪಿ: ಕಬಡ್ಡಿ ಆಡುವಾಗಲೇ ಹೆಬ್ರಿಯ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವು

Views: 176
ಕನ್ನಡ ಕರಾವಳಿ ಸುದ್ದಿ: ಕಬಡ್ಡಿ ಆಟವಾಡುತ್ತಿದ್ದಗಲೇ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಯುವ ಕಬಡ್ಡಿ ಆಟಗಾರ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ನಡೆದಿದೆ.

ಪ್ರೀತಂ ಶೆಟ್ಟಿ(24) ಮೃತರು. ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ಪ್ರೀತಂ ಶೆಟ್ಟಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆಟದ ಮೈದಾನಲ್ಲಿ ಆಟವಾಡುತ್ತಿದ್ದಗಲೇ ಏಕಾಏಕಿ ತೀವ್ರ ಎದೆನೋವು ಕಣಿಸಿಕೊಂಡು ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.






