ಉಡುಪಿ: ಎಟಿಎಂನಲ್ಲಿ ಮಾಹಿತಿ ನೀಡುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ವಂಚನೆ

Views: 114
ಉಡುಪಿ: ಎಟಿಎಂ ಕಾರ್ಡ್ ಮೂಲಕ ಹಣ ತೆಗೆಯಲು ಹೋಗಿದ್ದ ಗ್ರಾಹಕರು ಒಬ್ಬರಿಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುವ ನೆಪದಲ್ಲಿ ಬ್ಯಾಂಕ್ ವಿವರ ಪಡೆದು ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಪ್ರಕರಣ ದಾಖಲಾಗಿದೆ.
ಕೆಳಾರ್ಕಳಬೆಟ್ಟುವಿನ ಜಗದೀಶ್ ರಾವ್ ಅವರು ಅಕ್ಟೋಬರ್ 6ರಂದು ಸಂತೆಕಟ್ಟೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಎಟಿಎಂನಿಂದ ಅವರ ಕೆನರಾ ಬ್ಯಾಂಕ್ ಸೇವಿಂಗ್ ಖಾತೆಯಿಂದ 10,000 ರೂಪಾಯಿ ತೆಗೆದಿದ್ದರು. ನಂತರ ಖಾತೆಯ ಸ್ಟೇಟ್ ಮೆಂಟ್ ತೆಗೆಯುತ್ತಿರುವಾಗ ಅವರ ಹಿಂದೆ ಬಂದ ವ್ಯಕ್ತಿಯೋರ್ವ ಸಹಾಯ ಮಾಡುವಂತೆ ನಟಿಸಿ ಅವರ ಎಟಿಎಂ ಕಾರ್ಡ್ ಪಡೆದು ಬೇರೆ ವಿಧಾನದ ಮೂಲಕ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾನೆ.
ಜಗದೀಶ್ ಅವರು ಮನೆಗೆ ಬಂದು ಅವರ ಕೆನರಾ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಹಂತ ಹಂತವಾಗಿ ಎರಡು ಲಕ್ಷದ 2,29,998 ರೂಪಾಯಿ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ, ಕೂಡಲೆ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 32,192 ರೂಪಾಯಿ ಮಾತ್ರ ಇತ್ತು, ಅಪರಿಚಿತ ವ್ಯಕ್ತಿಯು ಜಗದೀಶ್ ಅವರ ಗಮನಕ್ಕೆ ಬಾರದೆ ಅವರ ಬ್ಯಾಂಕ್ ಖಾತೆಯಿಂದ 2.40 ಲಕ್ಷ ರೂಗಳನ್ನು ವರ್ಗಾಯಿಸಿಕೊಂಡಿದ್ದಾಗಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ