ಸಾಮಾಜಿಕ

ಈ ಊರ್ನಲ್ಲಿ ಕೂಗೋ ಕೋಳಿ ಸಾಕಂಗಿಲ್ಲ, ಹೆಂಡ ಕುಡಿದು ಬರಂಗಿಲ್ಲ; ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ

Views: 8

ಗದಗ: ಕೋಳಿ ಕೂಗಿದರೆ ಊರಿಗೆ ಕೆಡುಗಾಲವಂತೆ. ನಾಲ್ಕೈದು ತಲೆಮಾರಿನಿಂದ ಕೋಳಿ ಸಾಕಿಲ್ಲ ಈ ಊರಿನ ಗ್ರಾಮಸ್ಥರು. ಕೋಳಿ ಕೂಗದ ಊರು ಯಾವುದು ಹೇಳಿ. ಕೋಳಿ ಕೂಗದ ಊರಿಲ್ಲ ಹೆಂಡ ಗೊತ್ತಿಲ್ಲದ ಜನರಿಲ್ಲ ಅಂತಾರೆ. ಹಿಂದೆಲ್ಲಾ ಕೋಳಿ ಕೂಗಿತು ಅಂದ್ರೆ ಬೆಳಗಾಯ್ತು ಅಂತ ಎಚ್ಚರ ಆಗುತ್ತಿದ್ದರು. ಆದರೆ ಈ ಊರು ಮಾತ್ರ ಇದಕ್ಕೆ ತದ್ವಿರುದ್ಧ. ತಿರುಪತಿ ತಿಮ್ಮಪ್ಪನ ಮೇಲೆ ಯಾವುದೇ ವಿಮಾನ ಹಾರಾಟ ಮಾಡೋದಿಲ್ಲ. ಹಾಗೇ ಈ ಊರಿನ ತಿರುಪತಿ ದೇವಸ್ಥಾನದ ಮೇಲೆ ಕೋಳಿ ಕೂಗೋ ಹಾಗೆಯೇ ಇಲ್ಲ. ವಿಚಿತ್ರ ಅಂದ್ರು ಇದು ಸತ್ಯ. ಅಂದಹಾಗೆ ಈ ವಿಶೇಷ ಪದ್ಧತಿ ಇರೋದು ಗದಗ ತಾಲೂಕಿನ ಪಾಪನಾಶಿ ತಾಂಡಾದಲ್ಲಿ.

ಹೌದು, ಸುಮಾರು ನಾಲ್ಕೈದು ತಲೆಮಾರಿನಿಂದ ಈ ತಾಂಡಾದಲ್ಲಿ ಕೋಳಿನೇ ಸಾಕೋದಿಲ್ಲ. ಯಾವುದೇ ಊರಿಗೆ ಹೋದರೂ ನಮಗೆ ಕೊನೆ ಪಕ್ಷ ಕೋಳಿ ಮರಿ, ಕೋಳಿಮರಿ ಗೂಡು ಕಣ್ಣಿಗೆ ಬೀಳುತ್ತದೆ. ಆದರೆ ಈ ತಾಂಡಾದ ಊರಲ್ಲಿ ಗಲ್ಲಿ ಪ್ರತಿ ಮನೆ ಅಂಗಳದಲ್ಲಿ ಒಂದೇ ಒಂದು ಕೋಳಿ ಮರಿ ಕಾಣೋದಿಲ್ಲ. ಕೋಳಿ ಸಾಕಿದರೆ ಕೋಳಿ ಸಾಕಿದವರಿಗೆ ಮತ್ತು ಊರಲ್ಲಿ ಸಾವು ನೋವು ಸಂಭವಿಸುತ್ತವೆ. ಊರಲ್ಲಿ ರೋಗಗಳು ಹೆಚ್ಚಾಗುತ್ತವೆ. ಏನೋ ಒಂದು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಊರಲ್ಲಿ ಮನೆಮಾಡಿದೆ.

ಖೂಬಸಾದ ಮಹಾರಾಜರು ಹಿಂದೆ ಈ ಭವಿಷ್ಯ ನುಡಿದಿದ್ದರಂತೆ. ಒಂದು ವೇಳೆ ಕೋಳಿ ಕೂಗಿದರೆ ಹೆಂಡ ಕುಡಿದು ಊರಿಗೆ ಬಂದರೆ ಕೇಡು ಕಟ್ಟಿಟ್ಟಬುತ್ತಿ ಅಂತ ತಾಂಡಾದ ನಿವಾಸಿಗಳಿಗೆ ಎಚ್ಚರಿಕೆ ಕೊಟ್ಟಿದ್ದರಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಈ ತಾಂಡಾದಲ್ಲಿ ಕೋಳಿ ಸಾಕಾಣಿಕೆ ಮಾಡಿಲ್ಲ ಅಂತ ಗ್ರಾಮಸ್ಥರು ಹೇಳುತ್ತಾರೆ. ಇನ್ನು, ಕೆಲ ವರ್ಷಗಳ ಹಿಂದೆ ಹಿರಿಯರ ಮಾತನ್ನ ಧಿಕ್ಕರಿಸಿ ಊರ ಹೊರಗೆ ಕೋಳಿ ಸಾಕಿ ಕೈಸುಟ್ಟುಕೊಂಡು ಕೆಡುಕು ಅನುಭವಿಸಿದ್ದಾರಂತೆ. ಬಳಿಕ ತಪ್ಪಾಯ್ತು ಅಂತ ಕ್ಷಮೆಯಾಚನೆ ಮಾಡಿದರಂತೆ. ಒಟ್ಟಿನಲ್ಲಿ ಈ ಗ್ರಾಮದಲ್ಲಿ ಕೋಳಿ ಕೂಗಲ್ಲ ಕೋಳಿ ಕೂಗೋಕೂ ಬಿಟ್ಟಿಲ್ಲ.

Related Articles

Back to top button
error: Content is protected !!