ಇತರೆ

ಇಮ್ರಾನ್ ಖಾನ್ ಬದುಕಿದ್ದಾರಾ? ಇನ್ನೂ ಸಸ್ಪೆನ್ಸ್! ತಂದೆ ಬದುಕಿರವುದಕ್ಕೆ ಸಾಕ್ಷಿ ಕೊಡಿ ಎಂದ ಪುತ್ರ 

Views: 51

ಕನ್ನಡ ಕರಾವಳಿ ಸುದ್ದಿ: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಸುತ್ತ ಹಲವು ದಿನಗಳಿಂದ ವದಂತಿ ಮತ್ತು ಊಹಾಪೋಹಗಳು ಹರಿದಾಡುತ್ತಿರುವಂತೆಯೇ, ಅವರ ಪುತ್ರ ಖಾಸಿಮ್ ಖಾನ್ ರಂಗಪ್ರವೇಶ ಮಾಡಿದ್ದಾರೆ. ತಂದೆ ಬದುಕಿರವುದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಒಂದು ವೇಳೆ ಇಮ್ರಾನ್‌ಗೆ ತೊಂದರೆಯಾದರೆ ಪ್ರಧಾನಿ ಶೆಹಬಾಜ್ ಶರೀಫ್ ಸರಕಾರ ಕಾನೂನಾತ್ಮಕವಾಗಿ, ನೈತಿಕವಾಗಿ, ಅಂತಾ ರಾಷ್ಟ್ರೀಯವಾಗಿ ಹೊಣೆ ಹೊರೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶ ಮಾಡಬೇಕೆಂದು ವಿನಂತಿಸಿದ್ದಾರೆ. ಇಮ್ರಾನ್‌ರನ್ನು ಅಡಿಯಾಲ ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ಅಫ್ಘಾನ್ ಮಾಧ್ಯಮ ವೊಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪಾಕ್ ಸರಕಾರ ಅವರು ಸುರಕ್ಷಿತವಾಗಿದ್ದಾರೆಂದು ಹೇಳಿತ್ತು. ಆದರೆ ಸತತ 6 ವಾರಗಳಿಂದ ಇಮ್ರಾನ್‌ರನ್ನು ಏಕಾಂಗಿಯಾಗಿರಿಸಲಾಗಿದೆ. ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ವರದಿಗಳಾಗಿವೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಸಿಮ್ ಖಾನ್, ತನ್ನ ತಂದೆಯನ್ನು ಜೈಲಿಗೆ ಹಾಕಿ 845 ದಿನಗಳು ಕಳೆದಿವೆ. ಕಳೆದ ಒಂದೂವರೆ ತಿಂಗಳಿನಿಂದ, ಅವರನ್ನು ತಮ್ಮ ಕುಟುಂಬದೊಂದಿಗೆ ಯಾವುದೇ ಸಂಪರ್ಕ ವಿಲ್ಲದೆ ಮರಣದ ಕೊಠಡಿಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.

Related Articles

Back to top button
error: Content is protected !!