ಜನಮನ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ನಿಗೂಢ 5 ಅಸ್ತಿಪಂಜರ ಪತ್ತೆ:ಕುತೂಹಲಕಾರಿ ಸಾವಿನ ರಹಸ್ಯ! ಇಲ್ಲಿದೆ.. 

Views: 134

ಚಿತ್ರದುರ್ಗ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಚಿತ್ರದುರ್ಗದ ಮನೆಯಲ್ಲಿ ಪತ್ತೆಯಾದ ಅಸ್ತಿಪಂಜರದ ವಿಷ್ಯ ಬೆಳಕಿಗೆ ಬಂದಿದ್ದೇ ಒಂದು ಶ್ವಾನದಿಂದ. ಜನವಸತಿ ಪ್ರದೇಶದಲ್ಲೇ ಮನೆ ಇದ್ರೂ ಕೂಡ ಹಲವು ವರ್ಷಗಳಿಂದ ಯಾರಿಗೂ ಮಾಹಿತಿ ಇರಲಿಲ್ಲ. ಮಗನ ಕೃತ್ಯಗಳಿಂದ ಮನನೊಂದು ಸಮಾಜದಿಂದ ದೂರ ಉಳಿದ್ದ ಕುಟುಂಬ, ಅದೇ ಕಾರಣಕ್ಕೆ ಸಾವಿನ ದಾರಿ ಹಿಡಿಯಿತಾ ಅನ್ನೋದು ಸದ್ಯ ಕಾಡ್ತಿರೋ ಅನುಮಾನ.

ಇಷ್ಟು ದಿನ ಕಲ್ಲಿನ ಕೋಟೆಯಿಂದ ಸುದ್ದಿ ಆಗಿದ್ದ ಚಿತ್ರದುರ್ಗ ಇವತ್ತು ಅಸ್ತಿಪಂಜರಗಳಿಂದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಚಿತ್ರದುರ್ಗದ ಮನೆಯೊಂದರಲ್ಲಿ ಅಸ್ತಿಪಂಜರಗಳು ಪತ್ತೆ ಆಗಿದ್ದು, ಇಡೀ ಜಿಲ್ಲೆಯ ಜನರೇ ಬೆಚ್ಚಿಬಿದ್ದಿದ್ದಾರೆ. ಚಿತ್ರದುರ್ಗದ ಜೈಲು ರಸ್ತೆಯಲ್ಲಿ ಇರುವ ಪಾಳು ಮನೆಯಲ್ಲಿ ಅಸ್ತಿಪಂಜರಗಳು ಇದ್ದ ವಿಷ್ಯ ಗೊತ್ತಾಗಿದ್ದೇ ಶ್ವಾನವೊಂದರಿಂದ. ಬಂದ್​ ಆಗಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಕುಡುಕನೋರ್ವ ಕದಿಯಲು ಯತ್ನಿಸಿದ್ದ ಎನ್ನಲಾಗ್ತಿದೆ.

ಇದಾದ ಕೆಲ ದಿನಗಳ ಬಳಿಕ ಓಪನ್‌ ಆಗಿದ್ದ ಬಾಗಿಲಿನ ಮೂಲಕ ಬೀದಿ ನಾಯಿ ಮನೆಯೊಳಗೆ ಹೋಗಿದೆ. ತಲೆಬುರುಡೆಯೊಂದನ್ನು ಒಳಗಿನಿಂದ ಎಳೆದುಕೊಂಡು ಬಂದಿದೆ. ಆಗ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಸುದ್ದಿ ಹರಡಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದ್ರೆ, ಜನವಸತಿ ಪ್ರದೇಶದಲ್ಲಿರುವ ಮನೆಯಾದ್ರೂ ಸಾವಿನ ಬಗ್ಗೆ ಯಾರಿಗೂ ಗೊತ್ತಾಗಿಲ್ಲ ಅನ್ನೋದೇ ಸೋಜಿಗದ ಸಂಗತಿ. ಹಲವು ವರ್ಷಗಳಿಂದ ಮನೆ ಬಂದ್​ ಆಗಿತ್ತು ಅಂತಿದ್ದಾರೆ ಸ್ಥಳೀಯ ನಿವಾಸಿಗಳು.

ಮಗನ ಕೃತ್ಯಕ್ಕೆ ಬೇಸತ್ತು ಸಮಾಜದಿಂದ ದೂರವಿದ್ದ ಕುಟುಂಬ

ಚಿತ್ರದುರ್ಗದಲ್ಲಿ ಸಿಕ್ಕಿರುವ ಐದು ಅಸ್ತಿಪಂಜರಗಳ ರಹಸ್ಯದ ಬಗ್ಗೆ ಬಗೆದಷ್ಟು ಕುತೂಹಲಕಾರಿ ವಿಷ್ಯಗಳು ಹೊರಬರುತ್ತಿವೆ. ಜಗನ್ನಾಥ್​ ರೆಡ್ಡಿಯವರು ಮಗಳು ತ್ರಿವೇಣಿಗಾಗಿ ಚಿತ್ರದುರ್ಗದಲ್ಲಿ ಮನೆ ಕಟ್ಟಿಸಿದ್ದರಂತೆ. ಆದ್ರೆ, ಮಗಳಿಗೆ ಮದುವೆ ಆಗದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇನ್ನು ಮೊದಲ ಮಗ ಡಾಕ್ಟರ್​ ಆಗಿದ್ದು, ಈ ಹಿಂದೆಯೇ ಹೃದಯಾಘಾತದಿಂದ ತೀರಿಹೋಗಿದ್ದಾರೆ. 4ನೇ ಮಗ ನರೇಂದ್ರ ರೆಡ್ಡಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡ್ತಿದ್ದ. ಆದ್ರೆ, 2013ರಲ್ಲಿ ರಾಬರಿ ಕೇಸ್​ವೊಂದರಲ್ಲಿ ಸಿಕ್ಕಿಬಿದ್ದು ಕೆಲ ದಿನಗಳ ಜೈಲಿಗೆ ಹೋಗಿ ಬಂದಿದ್ದನಂತೆ. ಹೀಗಾಗಿ 4ನೇ ಮಗ ನರೇಂದ್ರ ರೆಡ್ಡಿ ವಿರುದ್ಧದ ಪ್ರಕರಣದಿಂದ ಮನನೊಂದಿದ್ದ ಜಗನ್ನಾಥ್​ ರೆಡ್ಡಿ ಕುಟುಂಬ ಸಮಾಜದಿಂದ ದೂರ ಉಳಿದಿತ್ತು. ತುಮಕೂರಿನಿಂದ ಬಂದು ಚಿತ್ರದುರ್ಗದಲ್ಲಿ ಇದ್ದರು ಎಂದು ಸಂಬಂಧಿಕರು ಹೇಳ್ತಿದ್ದಾರೆ.

ಜಗನ್ನಾಥ್​ ರೆಡ್ಡಿ ಮನೆಯಲ್ಲಿ ತಪಾಸಣೆ ವೇಳೆ ಮಾನವರ ಅಸ್ತಿಪಂಜರ ಜೊತೆಗೆ ಶ್ವಾನದ ಮೂಳೆಗಳೂ ಪತ್ತೆ ಆಗಿದೆ. ಜಗನ್ನಾಥರೆಡ್ಡಿ ಮನೆಯ ಮುಂದೆ ಶ್ವಾನ ಇದೆ ಎಂಬ ಬೋರ್ಡ್​ ಹಾಕಲಾಗಿದ್ದು. ಹೀಗಾಗಿ ಸಿಕ್ಕಿರುವ ಶ್ವಾನದ ಮೂಳೆಗಳು ಅವರು ಸಾಕಿದ್ದ ನಾಯಿಯದ್ದೇ ಇರಬಹುದು ಎನ್ನಲಾಗ್ತಿದೆ. ಹಾಗೂ ಸಾಕು ನಾಯಿಗೂ ಕುಟುಂಬದವರು ವಿಷ ಹಾಕಿ ಸಾಯಿಸಿರುವ ಬಗ್ಗೆ ಅನುಮಾನ ಮೂಡಿದೆ. ಶ್ವಾನದ ಅಸ್ತಿಪಂಜರವನ್ನು ಶವ ಪರೀಕ್ಷೆಗಾಗಿ ನಗರದ ಪಶು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಒಟ್ಟಾರೆ.. ಅಸ್ತಿಪಂಜರಗಳ ಪತ್ತೆಯಿಂದ ಸುತ್ತಮುತ್ತಲ ನಿವಾಸಿಗಳು ಆತಂಕಗೊಂಡಿದ್ದಾರೆ. ಆದ್ರೆ, ಜನವಸತಿ ಪ್ರದೇಶದಲ್ಲೇ ಈ ಘಟನೆ ನಡೆಸಿದ್ರೂ, ಯಾರಿಗೂ ವಿಷ್ಯಗೊತ್ತಾಗಿಲ್ಲ. ಶ್ವಾನ ತಲೆ ಬುರಡೆಯನ್ನು ಹೊರಗೆ ತರದಿದ್ರೆ, ಇನ್ನೂ ಅದೆಷ್ಟು ವರ್ಷಗಳು ಈ ರಹಸ್ಯ ರಹಸ್ಯವಾಗೇ ಉಳಿಯುತ್ತಿತ್ತೋ ಏನೋ.

Related Articles

Back to top button
error: Content is protected !!