ಇಂದು ಕುಂದಾಪುರ, ಬೈಂದೂರು ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ

Views: 99
ಕನ್ನಡ ಕರಾವಳಿ ಸುದ್ದಿ: ಬೈಂದೂರು ಮತ್ತು ಕೊಲ್ಲೂರು 33/11 ಕೆ.ವಿ.ಉಪಕೇಂದ್ರದಿಂದ ಹೊರಡುವ 11 ಕೆ.ವಿ.ಫೀಡರುಗಳಾದ ಬೈಂದೂರು ಉಪ್ಪುಂದ, ತಗ್ಗರ್ಸೆ, ಶಿರೂರು, ತೂದಳ್ಳಿ ಗಂಗನಾಡು, ಯಳಜಿತ್, ಕೊಲ್ಲೂರು ಮತ್ತು ಮುದೂರು ಹಾಗೂ 110ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರದಿಂದಹೊರಡುವ 11 ಕೆ.ವಿ ಹೇರೂರು ಮತ್ತು ಕಂಬದಕೋಣೆ ಫೀಡರುಗಳಲ್ಲಿ ಮೇ 13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಬೆಳಗ್ಗೆ 9 ರಿಂದ ಸಂಜೆ 5 ನಾವುಂದ ಗಂಟೆವರೆಗೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33 ಕೆ.ವಿ ಬೈಂದೂರು ಮತ್ತು 33ಕೆ.ವಿ ಕೊಲ್ಲೂರು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಶಿರೂರು, ತೂದಳ್ಳಿ,ಹೇರೂರು ಉಪ್ಪುಂದ, ಬಿಜೂರು, ತೂದಳ್ಳಿ, ಹೇರೂರು, ಕೊಲ್ಲೂರು, ಕರ್ಕುಂಜೆ, ಬೈಂದೂರು, ಗೋಳಿ ತಗ್ಗರ್ಸೆ, ಹೊಳೆ, ಯಳಜಿತ್, ಗಂಗನಾಡು, ನಾಯ್ಕನಕಟ್ಟೆ ಹೊಸೂರು, ಯಡ್ತರೆ, ಕಂಬದಕೋಣೆ, ಕಿರಿಮಂಜೇಶ್ವರ, ಕಾಲ್ಲೋಡು, ಹೇರಂಜಾಲು, ಬವಳಾಡಿ, ನಾಗೂರು, ಉಳ್ಳೂರು, ವರ್ಸೆ, ಪಡುವರಿ, ಕೆರ್ಗಾಲ್, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಗೋಳಿಹೊಳೆ,ಎಲ್ಲೂರು, ಬಾಳ್ ಕೊಡ್ಲು, ಹಾಲ್ಕಲ್, ದೋಣಿಗದ್ದೆ ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಬೇರು, ಜಡ್ಕಲ್, ಜನ್ಸಾಲ್, ಬೀಸಿನವಾರೆ, ಕಾನ್ನಿ ಮಕ್ಕೆ ಮತ್ತು ಮುದೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11.ಕೆವಿ ಅಂಪಾರು,ಬಳ್ಕೂರು ,ಜಪ್ತಿ ವಾಟರ್‌ಸಪ್ಲೈ, ತೆಕ್ಕಟ್ಟೆ ಮತ್ತು ಕೋಡಿ ಮಾರ್ಗ ವ್ಯಾಪ್ತಿಯ ಪ್ರದೇಶಗಳಲ್ಲಿ ಮೇ 13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಬೆಳಗ್ಗೆ 9 ರಿಂದ ಸಂಜೆ 5.30 ವರೆಗೆ ಟೀ ಟ್ರಿಮ್ಮಿಂಗ್ ಹಾಗೂ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿ, ಕೋಟೇಶ್ವರ, ಜಪ್ತಿ ವಾಟರ್‌ಸಪ್ಲೈ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಬಳ್ಳೂರು, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ ಬಳ್ಕೂರು, ಆನಗಳ್ಳಿ, ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ.
ಹಾಲಾಡಿ: ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ವಾರಾಹಿ ಫೀಡರಿನ ಮಾರ್ಗ ವ್ಯಾಪ್ತಿಯ ಪ್ರದೇಶಗಳಲ್ಲಿ ಮೇ 13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಬೆಳಗ್ಗೆ 9.30 ರಿಂದ ಸಂಜೆ 5.30 ವರೆಗೆ ಪಾಲನಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.ಯಳಜಿತ್, ಭರತ್‌ಕಲ್ಲು ಕುಳುಂಜೆ ಮತ್ತು ಹೊಸಬಾಳು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.






