ಜನಮನ

ಇಂದಿನಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 3 ರೂ. ಏರಿಕೆ

Views: 71

ಕನ್ನಡ ಕರಾವಳಿ ಸುದ್ದಿ: ಜಾಗತಿಕ ಇಂಧನ ಬೆಲೆಯಲ್ಲಿನ ಏರಿಕೆಯಿಂದಾಗಿ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 3 ರೂ. ಏರಿಕೆಯಾಗಿದೆ. 

ಲೀಟರ್ ಗೆ 3 ರೂ ಏರಿಕೆ ಮಾಡಿ ಇಂದಿನಿಂದಲೇ ಜಾರಿಗೆ ಬರುವಂತೆ ಬೆಲೆ ಹೆಚ್ಚಿಸಲಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯಿಂದಾಗಿ ಇಂಧನ ಬೆಲೆ ಏರಿಕೆ ಆಗಿದೆ.ದೇಶದ ಆರ್ಥಿಕತೆ ಕಾಪಾಡಲು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಬೇಕಾಗುತ್ತದೆ ಎಂದು ನಿನ್ನೆ ಆರ್ ಬಿಐ ಗವರ್ನರ್ ಸಹ ಹೇಳಿದ್ದರು. ಈ ಬೆನ್ನಲ್ಲೇ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ.

ನಿನ್ನೆಯಿಂದಲೇ ಕೆಲವಡೆ ಕಂಡು ಬಂದಿತ್ತು ನೋ ಸ್ಟಾಕ್ ಬೋರ್ಡ್: ಈ ಎಲ್ಲ ಸುಳಿವುಗಳಿಂದ ಭಾರತದ ಹಲವಾರು ನಗರಗಳಲ್ಲಿ ನಿನ್ನೆಯಿಂದಲೇ ಪೆಟ್ರೋಲ್ ಪಂಪ್‌ಗಳಲ್ಲಿ ಪ್ಯಾನಿಕ್ ಖರೀದಿ ಮತ್ತು ದೀರ್ಘ ಸರತಿ ಸಾಲುಗಳು ಕಂಡುಬಂದವು. ಮಾಧ್ಯಮ ವರದಿಯ ಪ್ರಕಾರ, ಗ್ರಾಹಕರು ಪೂರ್ಣ ಟ್ಯಾಂಕ್ ಮರುಪೂರಣಕ್ಕಾಗಿ ನಿನ್ನೆಯಿಂದಲೇ ಪೆಟ್ರೋಲ್ ಪಂಪ್ ಗಳತ್ತ ಧಾವಿಸುತ್ತಿದ್ದರು. ಕರ್ನಾಟಕ, ತೆಲಂಗಾಣ, ರಾಜಸ್ಥಾನ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿನ ಕೆಲವು ಪಂಪ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಗಳು ಕಂಡು ಬಂದಿದ್ದವು.

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಭಯವು ಗ್ರಾಹಕರು ಮತ್ತು ಇಂಧನ ಚಿಲ್ಲರೆ ವ್ಯಾಪಾರಿಗಳಲ್ಲಿ ವೇಗವಾಗಿ ಹರಡುತ್ತಿದ್ದಂತೆ ಭಾರತದಾದ್ಯಂತ ಹಲವಾರು ಪೆಟ್ರೋಲ್ ಪಂಪ್‌ಗಳಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಇಂಧನ ಖಾಲಿ ಎಂಬ ಬೋರ್ಡ್‌ಗಳು ಕಂಡುಬಂದವು.

ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಂದಾಗಿ ಇಂಧನ ಬೆಲೆ ಏರಿಕೆಯನ್ನು ತಡೆಯಲಾಗಿತ್ತು. ಈಗ ಎಲ್ಲವೂ ಮುಗಿದಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.

Related Articles

Back to top button
error: Content is protected !!