ಪ್ರವಾಸೋದ್ಯಮ
ಇಂಗ್ಲೆಂಡ್: ಲೇಖಕ, ಕಲಾವಿದ ಯೋಗೀಂದ್ರ ಮರವಂತೆಗೆ ಸನ್ಮಾನ

Views: 0
ಇಂಗ್ಲೆಂಡ್: ಇದೀಗ ಇಂಗ್ಲೆಂಡಿನ ವಿವಿಧೆಡೆ ಯಕ್ಷಗಾನ ಪ್ರದರ್ಶನ- ಪ್ರಾತ್ಯಕ್ಷಿಕೆ ಅಭಿಯಾನ ಕೈಗೊಂಡಿರುವ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಯಕ್ಷಗಾನ ಕಲಾವಿದರ ತಂಡವು ಶನಿವಾರ ಲಂಡನ್ನಿನಲ್ಲಿ ಮತ್ತು ಭಾನುವಾರ ಬರ್ಮಿಂಗ್ಹ್ಯಾಮ್ ನಲ್ಲಿ ಪ್ರದರ್ಶನ ನೀಡಿತು.
ಈ ಸಂದರ್ಭದಲ್ಲಿ ‘ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುಕೆ’ ಸಂಘಟನೆ (ಆಯಾಮ ಯುಕೆ ) ಆಯೋಜಿಸಿದ್ದ ಬರ್ಮಿಂಗ್ಹ್ಯಾಮ್ ನ ಪ್ರದರ್ಶನದಲ್ಲಿ ಆಯಾಮ ಯುಕೆಯ ಪ್ರತಿನಿಧಿ ಬ್ರಿಸ್ಟಲ್ ನ ಏರ್ ಬಸ್ ವಿಮಾನ ತಯಾರಿಕಾ ಸಂಸ್ಥೆಯಲ್ಲಿ ತಂತ್ರಜ್ಞ ಆಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ, ಲೇಖಕ ಯೋಗೀಂದ್ರ ಮರವಂತೆ ಅವರನ್ನು ಪಟ್ಲ ಸತೀಶ ಶೆಟ್ಟಿ ಗೌರವಿಸಿದರು.