ಜನಮನ

ಆಸ್ಪತ್ರೆಯ ತೊಟ್ಟಿಲಲ್ಲಿ ಮೂರು ದಿನದ ಮಗುವನ್ನು ಬಿಟ್ಟು ಹೋದ ತಾಯಿ

Views: 0

ತಾಯಿಯೊಬ್ಬಳು ಮೂರು ದಿನದ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಮುಂಡುಗೋಡಿನ ಜ್ಯೋತಿ ಆರೋಗ್ಯ ಆಸ್ಪತ್ರೆಯಲ್ಲಿ ನಡೆದಿದೆ.

ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಗುವನ್ನು ಹೆತ್ತು ಸಾಕಲಾಗದೆ ಇರುವವರಿಗಾಗಿ ತೊಟ್ಟಿಲನ್ನು ಇರಿಸಲಾಗಿತ್ತು. ಯಾರೋ ತಮ್ಮ ಹಸುಗೂಸನ್ನು ಬೆಳಗಿನ ಜಾವ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ ಎಂದು ತಿಳಿಯಲಾಗಿದೆ.

ಮಗುವನ್ನು ಗಮನಿಸಿದ ಆಸ್ಪತ್ರೆಯವರು ತಕ್ಷಣ ಪೊಲೀಸ್ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ತೆಗೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕ್ರೈಂ ಬ್ರಾಂಚಿನ ಹೆಚ್. ಬಿ ಕುಡಗುಂಟಿ ,ಸಿಬ್ಬಂದಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಇದ್ದರು.

Related Articles

Back to top button
error: Content is protected !!