ಆಸ್ಕರ್ ಪ್ರವೇಶಿಸಿದ್ದ ಕನ್ನಡ ಸಿನಿಮಾಗಳಿಗೆ ನಿರಾಸೆ: ಕಾಂತಾರ, ಮಹಾವತಾರ ನರಸಿಂಹ ಔಟ್!
Views: 63
ಕನ್ನಡ ಕರಾವಳಿ ಸುದ್ದಿ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳಾದ ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ ಚಿತ್ರಗಳು ಅಂತಿಮ ನಾಮನಿರ್ದೇಶನದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಹಿನ್ನಡೆ ಕಂಡಿವೆ.
‘ಕಾಂತಾರ ಚಾಪ್ಟರ್ 1’: ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿತ್ತು. ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿದ ಈ ಸಿನಿಮಾ 2025ರ ಎರಡನೇ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ವಿಶೇಷ ಚಿತ್ರ ವಿಶ್ವಾದ್ಯಂತ ಸರಿಸುಮಾರು 850 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಕಂಡಿದೆ.
ತನ್ನ ಕಥೆ, ನಿರೂಪಣೆ, ನಟನೆ ಮತ್ತು ಮೇಕಿಂಗ್ನಿಂದ ಸಿನಿಪ್ರಿಯರು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಗಣ್ಯರೂ ಗುಣಗಾನ ಮಾಡಿದ್ದ ಈ ಸಿನಿಮಾ ನಿರೀಕ್ಷೆಯಂತೆ ಗೆಲುವು ಸಾಧಿಸಿದೆ. ಭಾರತೀಯ ಕಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ.
‘ಮಹಾವತಾರ ನರಸಿಂಹ’: ‘ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮಹಾವತಾರ ನರಸಿಂಹ ಹೊರಹೊಮ್ಮಿತ್ತು. ಅಲ್ಲದೇ ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ ಕ್ಯಾಟಗರಿಯಲ್ಲಿ ಸೆಲೆಕ್ಟ್ ಆದ (ಕೇವಲ ನಾಮಿನೇಷನ್) ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಖ್ಯಾತಿಗೂ ಇದು ಪಾತ್ರವಾಗಿತ್ತು. ಆದ್ರೆ, ಫೈನಲ್ ನಾಮಿನೇಷನ್ಸ್ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಹಿನ್ನಡೆ ಕಂಡಿವೆ.






