ಇತರೆ

ಆಟವಾಡುವ ವೇಳೆ ಬಾಟಲ್‌ ಮುಚ್ಚಳ ನುಂಗಿ ಮಗು ಸಾವು 

Views: 95

ಶಿವಮೊಗ್ಗ : ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮನೆಯಲ್ಲಿ ಆಟವಾಡುವ ವೇಳೆ ಮಗುವಿಗೆ ಜ್ಯೂಸ್ ಬಾಟಲ್ ಸಿಕ್ಕಿದೆ. ಬಾಟಲ್‌ ಮುಚ್ಚಳ ಬಿಚ್ಚಿ ಬಾಯಿಗೆ ಹಾಕಿಕೊಂಡಿದೆ. ಜ್ಯೂಸ್ ಬಾಟಲ್‌ನ ಮುಚ್ಚಳ ನುಂಗಿದೆ. ಈ ವೇಳೆ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ.

ಶಿವಮೊಗ್ಗದ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.

ಬಾಟೆಲ್‌ ಮುಚ್ಚಳ ನುಂಗಿದ ಕೂಡಲೇ ಮಗು ಉಸಿರಾಡಲು ಆಗದೆ ಒದ್ದಾಡಿದೆ, ಜೋರಾಗಿ ಅಳುವ ಸದ್ದು ಕೇಳಿ ಪೋಷಕರು ಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದಾಗಲೇ ಮಗು ಪ್ರಾಣ ಬಿಟ್ಟಿದೆ.

 

Related Articles

Back to top button
error: Content is protected !!