ಸಾಂಸ್ಕೃತಿಕ

ಅಶ್ಲೀಲವಾಗಿ ನಟಿಗೆ ಮೆಸೇಜ್, ನಿರ್ದೇಶಕನ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ

Views: 107

ಕಾಸ್ಟಿಂಗ್ ಡೈರೆಕ್ಟರ್ ಸೂರ್ಯ  ಆಡಿಷನ್ಗೆ ಬಾ ಎಂದು  ಅಶ್ಲೀಲವಾಗಿ ನಟಿಗೆ ಮೆಸೇಜ್ ಮಾಡಿದ ಆತನ ವಿರುದ್ಧ ಅಮೂಲ್ಯ ಗೌಡ ದೂರು ನೀಡಿದ್ದಾರೆ. ರಾತ್ರಿ ಇಡೀ ಮೆಸೇಜ್, ಕಾಲ್ ಮಾಡಿ ಕಿರುಕುಳ ನೀಡಿದ್ದಕ್ಕೆ ಬೇಸತ್ತ ನಟಿ ಈಗ ಕಾನೂನಿನ ಮೂಲಕ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಮಂಚಕ್ಕೆ ಕರೆದಿದ್ದಾನೆ ಎಂದು ಸೂರ್ಯ ಎಂಬ ನಿರ್ದೇಶಕನ ಮೇಲೆ ನಟಿ ಅಮೂಲ್ಯ ಗೌಡ ಅವರು ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅವರು ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಾಟ್ಸಾಪ್ನಲ್ಲಿ ಕೆಟ್ಟದಾಗಿ ಮೆಸೇಜ್ ಕಳಿಸಿದ್ದಾನೆ ಎಂದು ಅಮೂಲ್ಯ ಗೌಡ ಅವರು ಸೂರ್ಯ ವಿರುದ್ಧ ದೂರಿನಲ್ಲಿ ಆರೋಪ ಹೊರಿಸಿದ್ದಾರೆ.  ಅಮೂಲ್ಯ ಗೌಡ ಅವರು ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ತಮ್ಮ ಫೋಟೋಗೆ ಸೂರ್ಯ ಕೀಳಾಗಿ ಪ್ರತಿಕ್ರಿಯಿಸಿದ್ದಾನೆ ಅದನ್ನು ಪ್ರಶ್ನಿಸಿದ್ದಕ್ಕೆ ‘ಯಾವ ಪೊಲೀಸರಿಗೆ ಬೇಕಾದರೂ ಕೇಳಿಕೋ’ ಎಂದು ನಟಿಗೆ ಆತ ಬೈಯ್ದಿದ್ದ. ಹಾಗಾಗಿ ನಟಿಯು ಪೊಲೀಸರ ಮೊರೆ ಹೋಗಿದ್ದಾರೆ.

ನಟಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ಆರೋಪ ಹೊತ್ತಿರುವ ಸೂರ್ಯ ಎಂಬಾತನು ಕಾಸ್ಟಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿದ್ದಾನೆ. ಆಡಿಷನ್ಗೆ ಬಾ ಅಂತ ಕೇಳುತ್ತಲೇ ಅಶ್ಲೀಲವಾಗಿ ಮೆಸೇಜ್ ಮಾಡಿದ ಆತನ ವಿರುದ್ಧ ಅಮೂಲ್ಯ ಗೌಡ ದೂರು ನೀಡಿದ್ದಾರೆ. ರಾತ್ರಿ ಇಡೀ ಮೆಸೇಜ್, ಕಾಲ್ ಮಾಡಿ ಕಿರುಕುಳ ನೀಡಿದ್ದಕ್ಕೆ ಬೇಸತ್ತ ನಟಿ ಈಗ ಕಾನೂನಿನ ಮೂಲಕ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಆತನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಬೇಕು ಎಂದು ನಟಿಯು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೂರ್ಯ ಎಂಬ ಆ ವ್ಯಕ್ತಿಯ ವರ್ತನೆ ಅತಿರೇಕ ಆದ್ದರಿಂದ ಇಂದು (ಮೇ 6) ಆತನನ್ನ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ ಎಂಬ ಮಾಹಿತಿ ಇದೆ.

Related Articles

Back to top button
error: Content is protected !!