ಅರ್ಜುನ ಪ್ರಶಸ್ತಿ ವಿಜೇತೆ ಬಾಕ್ಸರ್ ಸ್ವೀಟಿ ಬೂರಾ ಗಂಡನ ವಿರುದ್ಧ ದೂರು ದಾಖಲು

Views: 58
ಕನ್ನಡ ಕರಾವಳಿ ಸುದ್ದಿ: ಅರ್ಜುನ ಪ್ರಶಸ್ತಿ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಸ್ವೀಟಿ ಅವರ ಪತಿ ದೀಪಕ್ ಕಬ್ಬಡ್ಡಿಯಲ್ಲಿ ಏಷ್ಯಾಡ್ ಕಂಚಿನ ಪದಕ ವಿಜೇತರಾಗಿದ್ದಾರೆ. ಸ್ವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಇದೀಗ ದೀಪಕ್ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹರಿಯಾಣದ ಹಿಸ್ಸಾರ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ವೀಟಿ ಅವರ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ದೀಪಕ್ ಅವರಿಗೆ ಎರಡು, ಮೂರು ಬಾರಿ ನೊಟೀಸ್ ನೀಡಿದರೂ ಅವರು ಠಾಣೆಗೆ ಹಾಜರಾಗಿಲ್ಲ’ ಎಂದು ಹಿಸ್ಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ತಿಳಿಸಿದ್ದಾರೆ.
‘ವಿಲಾಸಿ ಕಾರು ನೀಡುವಂತೆ ಒತ್ತಾಯಿಸಿದ್ದು, ಅದನ್ನು ಈಡೇರಿಸಲಾಗಿದೆ. ಆದರೆ ಪತಿ ಆಕೆಗೆ ಹೊಡೆಯುತ್ತಾರೆ. ಹಣ ಕೊಡುವಂತೆ ಪೀಡಿಸುತ್ತಿರುತ್ತಾರೆ’ ಎಂದು ಎಸ್‌ಎಚ್‌ಒ ದೂರಿನಲ್ಲಿರುವ ಅಂಶ ಹೆಕ್ಕಿ ಹೇಳಿದರು.