ಜನಮನ
ಅಮೇರಿಕಾದಲ್ಲಿ ದಾವಣಗೆರೆಯ ಪತಿ-ಪತ್ನಿ ಮಗು ಸಾವಿನ ಪ್ರಕರಣಕ್ಕೆ ಅಘಾತಕಾರಿ ಮಾಹಿತಿ ಹೊರಬಿದ್ದಿದೆ

Views: 1
ಅಮೆರಿಕಾದ ಮೇರಿಲ್ಯಾಂಡ್ ನ ಬಾಲ್ವಿಮೋರಿನಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಯೋಗೇಶ್, ಪ್ರತಿಭಾ, ಮಗ ಯಶ್ ನಿಗೂಢವಾಗಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ನಡೆದ ಘಟನೆಯೇ ಬೇರೆ.

ಪತಿ ಯೋಗೇಶನೇ ಪತ್ನಿ ಮತ್ತು ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಘಾತಕಾರಿ ಮಾಹಿತಿ ತಿಳಿದು ಬಂದಿದೆ.
ಯೋಗೇಶ್ ಪತ್ನಿ ಮಗುವನ್ನು ಗುಂಡಿಟ್ಟು ಕೊಂದ ಬಳಿಕ ತಾನು ಗುಂಡು ಹಾರಿಸಿಕೊಂಡು ಸಾವನಪ್ಪಿದ್ದು, ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.






