ಜನಮನ

ಅಮೇರಿಕದಲ್ಲಿ ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ, ಮಗು ನಿಗೂಢ ಸಾವು

Views: 0

ಅಮೇರಿಕದ ಮೇರಿಲ್ಯಾಂಡ್ ನ ಬಾಲ್ವಿಮೋರಿನಲ್ಲಿ ನೆಲೆಸಿದ್ದ ದಾವಣಗೆರೆ ಮೂಲದ ದಂಪತಿ, ಮಗು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ.

ಯೋಗೇಶ್( 37 )ಪ್ರತಿಭಾ( 35) ಹಾಗೂ ಪುತ್ರ ಯಶ್( 6) ಮೃತರು.

ಇಂಜಿನಿಯರ್ ಆಗಿದ್ದ ಯೋಗೇಶ್ ತನ್ನ ಕುಟುಂಬದವರೊಂದಿಗೆ ಕಳೆದ 9 ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿದ್ದರು.

ಅಲ್ಲಿನ ಪೊಲೀಸರು ದಾವಣಗೆರೆಯಲ್ಲಿರುವ ಕುಟುಂಬದವರಿಗೆ ಫೋನ್ ಮಾಡಿ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಾಹಿತಿ ನೀಡಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಕಳೆದ 25 ವರ್ಷಗಳಿಂದ ಯೋಗೀಶನ ತಂದೆ ದಾವಣಗೆರೆಯ ವಿದ್ಯಾನಗರದಲ್ಲಿ ನೆಲೆಸಿದ್ದಾರೆ. ಆದಷ್ಟು ಬೇಗ ಅವರ ಶವಗಳನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!