ಇತರೆ
ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳನ್ನೇ ಬರ್ಬರವಾಗಿ ಹತ್ಯೆಗೈದ ತಂದೆ
Views: 90
ಕನ್ನಡ ಕರಾವಳಿ ಸುದ್ದಿ: ಅನ್ಯ ಜಾತಿ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆಯೇ ಹತ್ಯೆ ಮಾಡಿದ್ದಾನೆ. ಹುಬ್ಬಳ್ಲಿಯ ಇನಾಂ ವೀರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾನ್ಯಾ ಪಾಟೀಲ್ ಕೊಲೆಯಾದ ಮಗಳು. ತಂದೆ ಪ್ರಕಾಶ್ ಸೇರಿ ಹಲವರು ಗರ್ಭಿಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಮಾನ್ಯಾ ಸಾವನ್ನಪ್ಪಿದ್ದಾಳೆ. ಮಾನ್ಯಾಳ ಪತಿ ವಿವೇಕಾನಂದ ಮೇಲೂ ಹಲ್ಲೆ ನಡೆಸಲಾಗಿದೆ.
ಸ್ಪ್ರಿಂಕ್ಲರ್ ಪೈಪ್ ಹಾಗೂ ಕೊಡಲಿಯಿಂದ ಹೊಡೆದು ಮಾನ್ಯಾಳನ್ನು ಹತ್ಯೆ ಮಾಡಲಾಗಿದೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳನ್ನು ತಂದೆಯೇ ಕೊಲೆಗೈದಿದ್ದಾನೆ. ಮಾನ್ಯಾಳ ತಂದೆ ಪ್ರಕಾಶ್ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.






